ಪುತ್ತೂರು: ವ್ಯಾಯಾಮ ಮಾಡಿಸುವ ನೆಪದಲ್ಲಿ ವಿದ್ಯಾರ್ಥಿನಿಯ ಸೊಂಟ ಮುಟ್ಟಿದ ಪುತ್ತೂರಿನ ಪ್ರತಿಷ್ಠಿತ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ಈಗ ಕಂಬಿ ಎಣಿಸುವಂತಾಗಿದೆ. ಹುಡುಗಿಯ ತಾಯಿ ಪೊಲೀಸ್ ದೂರು ನೀಡಿದ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಪೋಕ್ಸೊ ಕಾಯಿದೆಯಡಿ ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿ ಮಡಿಕೇರಿ ಮೂಲದವಳು ಎಂದು ತಿಳಿದು ಬಂದಿದೆ. ಪುತ್ತೂರಿನ ವಸತಿ ನಿಲಯವೊಂದರಲ್ಲಿ ತಂಗಿದ್ದಳು. ಮೆ 25ರಂದು ಸಂಜೆ ದೂರು ದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಿಕ್ಷಕ ಎಲ್ಯಾಸ್ ಪಿಂಟೋ ಅವರನ್ನು ಬಂಧಿಸಿದ್ದಾರೆ.