ಕ್ರೈಂ

ಪುತ್ತೂರು ನಗರ ಠಾಣೆಯ ASIಗೆ ಬ್ರೈನ್ ಸ್ಕ್ರೋಕ್..!, ಇಂದು ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ

ನ್ಯೂಸ್ ನಾಟೌಟ್: ಪುತ್ತೂರು ನಗರ ಠಾಣೆಯಲ್ಲಿ ASI ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪೆರುವಾಜೆ ಗ್ರಾಮದ ನಿವಾಸಿ ಎಎಸ್ ಐ ಸುಂದರ ಕಾನಾವು ಅವರು ಜು.22 ರಂದು ಬೆಳಗ್ಗೆ ನಿಧನರಾಗಿದ್ದಾರೆ.

ಅವರಿಗೆ ಕಳೆದ ಮೂರು ದಿನಗಳ ಹಿಂದೆ ಬ್ರೈನ್ ಸ್ಟ್ರೋಕ್ ಗೆ ಒಳಗಾಗಿದ್ದರು, ಈ ಹಿನ್ನೆಲೆಯಲ್ಲಿ ಮಂಗಳೂರಿನ ಪಡೀಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಸದ್ಯ ಮೃತರ ಪಾರ್ಥಿವ ಶರೀರ ಮಂಗಳೂರಿನಲ್ಲಿ ಇದೆ ಎಂದು ಕುಟುಂಬದ ಮೂಲದಗಳು ತಿಳಿಸಿವೆ. ಮೂಲ್ಕಿ ಪೊಲೀಸ್ ಠಾಣೆಯಿಂದ ಅವರ ವೃತ್ತಿ ಜೀವನ ಆರಂಭಗೊಂಡಿತ್ತು. ಸುಬ್ರಹ್ಮಣ್ಯ ಠಾಣೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಹೆಡ್ ಕಾನ್ಸ್ಟೇಬಲ್ ಆಗಿ ಬಂಟ್ವಾಳ ಠಾಣೆಗೆ ವರ್ಗಾವಣೆಗೊಂಡಿದ್ದರು. ಅಲ್ಲಿಂದ ಸಂಪ್ಯ ಠಾಣೆಗೆ ಪೊಲೀಸ್ ಉಪ ನಿರೀಕ್ಷಕರಾಗಿ ವರ್ಗಾವಣೆಗೊಂಡಿದ್ದರು. ಕೆಲವು ದಿನಗಳ ಹಿಂದೆ ಪುತ್ತೂರು ನಗರ ಠಾಣೆಗೆ ವರ್ಗಾವಣೆಗೊಂಡಿದ್ದರು.

Related posts

ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವರನ್ನು ಬಂಧಿಸಲಾಗುವುದು ಎಂದ ಗೃಹಸಚಿವ..! ಇಲ್ಲಿದೆ ಸಂಪೂರ್ಣ ಮಾಹಿತಿ

ಸಂಪಾಜೆ: ಗುಂಡ್ಯ ಪದ್ಮಾವತಿ ನಿಧನ, ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ದೆ

ಮೋಸ್ಟ್‌ ವಾಂಟೆಡ್‌ ಕಳ್ಳ ಹೆಡ್ ಕಾನ್ಸ್ಟೇಬಲ್ ಮಗಳನ್ನೇ ಮದುವೆಯಾದ..! ಜೈಲಿನಲ್ಲೇ ನಕಲಿ ಕೀ ತಯಾರಿಕೆ ಕಲಿತಿದ್ದ ಈ ಕಳ್ಳ ಯಾರು..?