ಕರಾವಳಿ

ಪುತ್ತೂರು: ಸಗರಸಭಾ ಸದಸ್ಯ ನೇಣು ಬಿಗಿದು ಆತ್ಮಹತ್ಯೆ , ಮನೆಯಲ್ಲಿ ಯಾರೂ ಇಲ್ಲದ ವೇಳೆ ದುರಂತ

ನ್ಯೂಸ್ ನಾಟೌಟ್ :ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ. ಇವರು ನಗರಸಭಾ ಸದಸ್ಯರಾಗಿದ್ದು,ಶಿವರಾಮ್ ಸಪಲ್ಯ ಮೃತ ವ್ಯಕ್ತಿ ಎಂದು ಎಂದು ಗುರುತಿಸಲಾಗಿದೆ.

ಪತ್ನಿ ಫೋನ್ ಮಾಡುವ ವೇಳೇ ಫೋನನ್ನು ಪತಿ ಸ್ವೀಕರಿಸಲಿಲ್ಲ.ಈ ವೇಳೆ ಹತ್ತಿರದ ಮನೆಯವರಿಗೆ ಮನೆಗೆ ತೆರಳಿ ನೋಡುವಂತೆ ಹೇಳಿದ್ದಾರೆ. ಆಗ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ.ಮೃತರು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಶಿವರಾಮ್ ಸಪಲ್ಯ ರವರು ಊರಮಾಲು ನಿವಾಸಿಯಾಗಿದ್ದು,ಪುತ್ತೂರು ನಗರಸಭಾ ಸದಸ್ಯರಾಗಿದ್ದರು. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Related posts

ಬೈಕ್‌ಗಳ ನಡುವೆ ಅಪಘಾತ, ಓರ್ವ ಸಾವು; ಮೂವರು ಗಂಭೀರ

ಕೊಡಗಿನ ವ್ಯಕ್ತಿಯಿಂದ ಸಕಲೇಶಪುರದಲ್ಲಿ ವಿಷ ಸೇವನೆ, ಗಂಭೀರ ಸ್ಥಿತಿಯಲ್ಲಿರುವ ವ್ಯಕ್ತಿಯ ಮನೆಯವರಿಗಾಗಿ ಮನವಿ

55 ಲಕ್ಷ ರೂ. ಹಣದ ವಂಚನೆ, ಕೇರಳ ಪೊಲೀಸರಿಗೆ ಅತಿಥಿಯಾದ ಸುಳ್ಯದ ವ್ಯಕ್ತಿ