ಕರಾವಳಿ

55 ಲಕ್ಷ ರೂ. ಹಣದ ವಂಚನೆ, ಕೇರಳ ಪೊಲೀಸರಿಗೆ ಅತಿಥಿಯಾದ ಸುಳ್ಯದ ವ್ಯಕ್ತಿ

ಕಾಸರಗೋಡು: ಲೀಸಿಗೆ ಜಾಗ ಕೊಡುವುದಾಗಿ ನಂಬಿಸಿ ಮೋಸ ಮಾಡಿದ ಆರೋಪದಲ್ಲಿ ಸುಳ್ಯದ ವ್ಯಕ್ತಿಯೊಬ್ಬ ಕೇರಳ ಪೊಲೀಸರಿಗೆ ಸಿಕ್ಕಿ ಬಿದ್ದು ಕಂಬಿ ಎಣಿಸುತ್ತಿರುವ ಘಟನೆ ವರದಿಯಾಗಿದೆ. 750 ಎಕರೆ ಜಾಗವನ್ನು ಲೀಸ್ ಗೆ ಮಾಡಿಕೊಡುವುದಾಗಿ ಅನ್ವರ್ ಎಂಬಾತ ನಂಬಿಸಿದ್ದ. ಕೇರಳದ ರಾಜೀವನ್ ಹಾಗೂ ಶ್ರೀಧರನ್ ಎಂಬುವವರಿಂದ ಹಣ ಪಡೆದಿದ್ದ. ನಂತರ ಅನ್ವರ್ ತನ್ನ ಮೊಬೈಲ್‌ ಅನ್ನು ಸ್ವಿಚ್ ಆಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದ. ಆದೂರು ಎಸ್‌ ಐಟಿ ನಾರ್ ಕೋರ್ಟ್ ಪೊಲೀಸರು ಅನ್ವರ್ ಸುಳ್ಯದಲ್ಲಿರುವುದನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

Related posts

ಉಳ್ಳಾಲದಲ್ಲಿ ನೇಪಾಳ ಮೂಲದ 16ರ ಬಾಲಕಿ ನಿಗೂಢ ಆತ್ಮಹತ್ಯೆ..! ಶೌಚಾಲಯದ ಕಬ್ಬಿಣದ ಸಲಾಕೆಗೆ ನೇಣು ಬಿಗಿದುಕೊಂಡ 8ನೇ ತರಗತಿ ಬಾಲಕಿ ..!

ಬಂಟ್ವಾಳದಲ್ಲಿ ಹೆಚ್ಚಾದ ಮಾದಕ ವಸ್ತುಗಳ ಘಾಟು..! ಆರೋಪಿಯ ಬಂಧನ

ಪ್ರವಾಸಿ ತಾಣಗಳಲ್ಲಿ ರಜೆಯ ಮೋಜು ಅನುಭವಿಸಿದ ಪ್ರವಾಸಿಗರು..!ದೇವಸ್ಥಾನಗಳಲ್ಲಿಯೂ ಭಕ್ತರ ಸರತಿ ಸಾಲು..!