ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ವೈದ್ಯೆ ಗುರುಪ್ರೀತ್ ಕೌರ್ ಅವರನ್ನು ಸರಳವಾಗಿ ವಿವಾಹವಾದರು.
ಚಂಡೀಗಡದ ಮಾನ್ ನಿವಾಸದಲ್ಲಿ ನಡೆದ, ಕೆಲವೇ ಆಪ್ತರಿಗಷ್ಟೇ ಆಹ್ವಾನವಿದ್ದ ವಿವಾಹ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಎಎಪಿಯ ಕೆಲ ನಾಯಕರು ಉಪಸ್ಥಿತರಿದ್ದರು. ಮಾನ್ ಈ ಹಿಂದೆ ಇಂದರ್ ಪ್ರೀತ್ ಕೌರ್ ಅವರನ್ನು ಮದುವೆಯಾಗಿದ್ದರು. ಅವರಿಗೆ 2015 ರಲ್ಲಿ ವಿಚ್ಛೇದನ ನೀಡಿದ್ದಾರೆ. ಮಾನ್ ಅವರ ಮೊದಲ ಪತ್ನಿ ಮತ್ತು ಇಬ್ಬರು ಮಕ್ಕಳು ಅಮೆರಿಕದಲ್ಲಿ ನೆಲೆಸಿದ್ದಾರೆ.