ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

ಪಬ್ಜಿ ಪ್ರೇಮಿಗಾಗಿ ಭಾರತಕ್ಕೆ ಹಾರಿ ಬಂದ್ಳು ಮತ್ತೊಬ್ಬಳು ಯುವತಿ..! ಪಾಕ್ ಆಯ್ತು ಈಗ ಬಾಂಗ್ಲಾ ಯುವತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ?

ನ್ಯೂಸ್ ನಾಟೌಟ್ : ಇತ್ತೀಚೆಗಷ್ಟೇ ಪಾಕಿಸ್ತಾನದ ಮಹಿಳೆ ಸೀಮಾ ಹೈದರ್‌ ತನ್ನ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಓಡಿಬಂದು ಪಬ್ಜಿ ಪ್ರೇಮಿಯನ್ನ ಸೇರಿಕೊಂಡಿದ್ದಾಳೆ. ಈ ಘಟನೆ ಆದ ಬಳಿಕ ಮುಂಬೈ ಪೊಲೀಸರಿಗೆ ಬೆದರಿಕೆ ಕರೆಗಳು ಬಂದಿದ್ದವು. ಆದರೆ ವಿಚಿತ್ರ ಎಂಬಂತೆ ಅದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಪ್ರೇಮಿಯನ್ನ ಹುಡುಕಿಕೊಂಡು ಅಕ್ರಮವಾಗಿ ಭಾರತವನ್ನ ಪ್ರವೇಶಿಸಿದ್ದ ಬಾಂಗ್ಲಾದೇಶದ ಯುವತಿಯನ್ನ ಪೊಲೀಸರು ಬಂಧಿಸಿದ್ದಾರೆ.

ಬಾಂಗ್ಲಾದೇಶದ ಜೆಸ್ಸೋರ್ ಮೂಲದ ಸಪ್ಲಾ ಅಖ್ತರ್‌ ಬಂಧಿತ ಯುವತಿಯಾಗಿದ್ದು, ತನ್ನ ಪ್ರಿಯಕರನನ್ನು ಭೇಟಿಯಾಗಲು ಅಂತಾರಾಷ್ಟ್ರೀಯ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇರೆಗೆ ಸಿಲಿಗುರಿ ಕಮಿಷನರೇಟ್‌ ವ್ಯಾಪ್ತಿಯ ಪ್ರಧಾನನಗರ ಠಾಣೆ ಪೊಲೀಸರು ಈಕೆಯನ್ನು ಬಂಧಿಸಿದ್ದಾರೆ. ಆಕೆಗೆ ಪಬ್ಜಿ ಗೇಮ್‌ ಆಡುವ ವೇಳೆ ಭಾರತ ಮೂಲದ ಯುವಕನ ಪರಿಚಯವಾಗಿದೆ. ಇಬ್ಬರ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿ ಕಳೆದ ಎರಡೂವರೆ ತಿಂಗಳಿಂದ ಪ್ರತಿದಿನ ಫೋನ್‌ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.

ಗಡಿ ದಾಟಿ ಬಂದ ಯುವತಿ ಜೀವನೋಪಾಯಕ್ಕಾಗಿ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡಿಕೊಂಡಿದ್ದಳು. ಇದೇ ಸಂದರ್ಭದಲ್ಲಿ ಯುವತಿಗೆ ತನ್ನ ಪ್ರಿಯಕರ ಮೋಸ ಮಾಡಿ ತನ್ನನ್ನು ನೇಪಾಳಕ್ಕೆ ಮಾರಾಟ ಮಾಡಲು ಯತ್ನಿಸುತ್ತಿದ್ದಾನೆ ಎಂಬ ವಿಷಯ ಗೊತ್ತಾಗಿದೆ. ಕೂಡಲೇ ಪ್ರಿಯಕರನಿಂದ ತಪ್ಪಿಸಿಕೊಂಡು ಸಿಲಿಗುರಿ ಪಟ್ಟಣದಲ್ಲಿ ರಾತ್ರಿಯೆಲ್ಲ ಸುತ್ತಾಡಿದ್ದಾಳೆ. ಇದನ್ನು ಕಂಡ ಸ್ವಯಂಸೇವಾ ಸಂಸ್ಥೆಯೊಂದರ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವಕನನ್ನ 21 ವರ್ಷದ ಸಪ್ಲಾ ಅಖ್ತರ್ ನಂಬಿದ್ದಳು. ಎರಡೂವರೆ ತಿಂಗಳ ಹಿಂದೆಯೇ ಸಪ್ಲಾ, ಗಡಿ ದಾಟಿ ಭಾರತ ಪ್ರವೇಶಿಸಿದ್ದಳು. ಭದ್ರತಾ ಪಡೆಗಳ ಕಣ್ತಪ್ಪಿಸಿ ಗಡಿಯಲ್ಲಿನ ಮುಳ್ಳು ತಂತಿ ಬೇಲಿಯನ್ನು ದಾಟಿ ಬಂದಿದ್ದಳು. ಆಕೆಯ ಬಳಿ ಪಾಸ್‌ಪೋರ್ಟ್ ಕೂಡ ಇಲ್ಲ. ಆರಂಭದಲ್ಲಿ ಪ್ರಿಯಕರನ ಜೊತೆ ಸೇರಿಕೊಳ್ಳುವ ಸಂತಸದಲ್ಲಿದ್ದ ಸಪ್ಲಾ, ಗೆಳೆಯನೊಂದಿಗೆ ವಿದೇಶಿ ನೆಲದಲ್ಲಿ ಜೀವನ ಕಟ್ಟಿಕೊಳ್ಳುವ ಕನಸು ಕಂಡಿದ್ದಳು. ಆದ್ರೆ ಗೆಳೆಯನ ಮುಖವಾಡ ಬಯಲಾಗುತ್ತಿದ್ದಂತೆ ಆತನ ಹಿಡಿತದಿಂದ ಹೇಗೋ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ ಎಂದು ವರದಿ ತಿಳಿಸಿದೆ.

Related posts

ಪ್ರೀತಿಸಿ ಮದುವೆಯಾದಕೆಯನ್ನು ಕುರ್ಚಿಗೆ ಕಟ್ಟಿಹಾಕಿ ಚಿತ್ರಹಿಂಸೆ ಕೊಟ್ಟು ಕೊಂದ ಗಂಡ..! ಕನ್ನಡ ಚಿತ್ರರಂಗದಲ್ಲಿ ಕೊರಿಯೋಗ್ರಾಫರ್ ಆಗಿದ್ದ ಯುವತಿ..!

ಅವಿವಾಹಿತರಿಗೆ ಸರ್ಕಾರದಿಂದ ಗುಡ್​ ನ್ಯೂಸ್​! ಏನಿದು ಹೊಸ ಯೋಜನೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಕ್ರೈಸ್ತರಿಂದ ಚರ್ಚ್‌ನಲ್ಲಿ ಆಯುಧ ಪೂಜೆ..! ಈ ವಿಶೇಷ ಆಚರಣೆಯ ಹಿಂದಿರುವ ರಹಸ್ಯವೇನು?