ಕ್ರೈಂರಾಜ್ಯ

ಯುವತಿ ಜತೆ ಪಿಎಸ್‌ಐ ಅನೈತಿಕ ಸಂಬಂಧ, ಪ್ರಶ್ನಿಸಿದ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ..!

ನ್ಯೂಸ್‌ ನಾಟೌಟ್‌: ಯುವತಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಎಎಸ್‌ಐಯೋರ್ವ ತನ್ನ ಕೃತ್ಯ ಬಟ ಬಯಲಾದ್ದಕ್ಕೆ ಪತ್ನಿ ಮೇಲೆಯೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಳಗಾವಿಯ ಮಾಳ ಮಾರುತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಿಎಸ್ಐ ಉದ್ದಪ್ಪ ಕಟ್ಟಿಕಾರ​ ವಿರುದ್ಧ ಪತ್ನಿ ಪ್ರತಿಮಾ ಹಲ್ಲೆ ಆರೋಪ ಮಾಡಿದ್ದಾರೆ. ಉದ್ದಪ್ಪನಿಗೆ ಯುವತಿ ಜೊತೆಗೆ ಅಕ್ರಮ ಸಂಬಂಧ (extramarital affairs) ಹೊಂದಿದ್ದ ಆರೋಪ ಮಾಡಲಾಗಿದ್ದು, ಅದನ್ನು ಪ್ರಶ್ನಿಸಿದ್ದಕ್ಕೆ ಮಕ್ಕಳ ಎದುರೇ ಪ್ರತಿಮಾ ಮೇಲೆ ಹಲ್ಲೆ ಮಾಡಿದ್ದು, ಕಣ್ಣು, ಕುತ್ತಿಗೆ ಭಾಗಕ್ಕೆ ಉದ್ದಪ್ಪ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಹಲ್ಲೆಗೊಳಗಾದ ಪ್ರತಿಮಾ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗಾವಿಯ ರಾಮತೀರ್ಥನಗರದಲ್ಲಿ ಪತ್ನಿ ಹಾಗೂ ಮಕ್ಕಳು ಬಾಡಿಗೆ ಮನೆಯಲ್ಲಿದ್ದರು. ಈ ಹಿಂದೆಯೂ ಪತ್ನಿ ಮೇಲೆ  ಉದ್ದಪ್ಪ ಕಟ್ಟಿಕಾರ ಹಲ್ಲೆ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು ಎಂದು ತಿಳಿದುಬಂದಿದೆ.

Related posts

ಕಡಬ: ಮೆದುಳಿನ ರಕ್ತ ಸ್ರಾವದಿಂದ  ಬಾಲಕಿ ಸಾವು

ಸುಳ್ಯ: ನಾಪತ್ತೆಯಾಗಿದ್ದ ವೃದ್ಧೆ ಶವವಾಗಿ ಪತ್ತೆ..! ಒಂದು ದಿನದ ಹುಡುಕಾಟದ ಬಳಿಕ ಸಿಕ್ಕಿತು ಶವ

ಆಸ್ಪತ್ರೆಯೊಳಗೆ ಬೆತ್ತಲೆಯಾಗಿ ಓಡಾಡಿದನಾ ಡಾಕ್ಟರ್..? ಸರ್ಕಾರಿ ಆಸ್ಪತ್ರೆ ವೈದ್ಯನ ವಿಡಿಯೋ ವೈರಲ್ , ಸ್ಥಳೀಯರು ಹೇಳಿದ್ದೇನು..?