ಕರಾವಳಿಕ್ರೈಂ

ಕಡಬ: ಮೆದುಳಿನ ರಕ್ತ ಸ್ರಾವದಿಂದ  ಬಾಲಕಿ ಸಾವು

ಕಡಬ: ಮೆದುಳಿನ ರಕ್ತಸ್ರಾವದಿಂದ  ಬಾಲಕಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಕುಂತೂರು ಎಂಬಲ್ಲಿ ಶುಕ್ರವಾರದಂದು ನಡೆದಿದೆ. ಮೃತ ಬಾಲಕಿಯನ್ನು ಕುಂತೂರು ಗ್ರಾಮದ ಮಣಿಕ್ಕಳ ನಿವಾಸಿ ಸೋಮನಾಥ ಗೌಡ – ಕುಸುಮಾವತಿ ದಂಪತಿಯ ಪುತ್ರಿ ಅಪೇಕ್ಷಾ  (11)  ಎಂದು ತಿಳಿದು ಬಂದಿದೆ . ಕಳೆದ ಕೆಲವು ಸಮಯಗಳಿಂದ ತಲೆನೋವಿನಿಂದ ಬಳಲುತ್ತಿದ್ದ ಬಾಲಕಿಗೆ ಶುಕ್ರವಾರ ಬೆಳಿಗ್ಗೆ ವಿಪರೀತ ತಲೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದೊಯ್ಯುವ ಹಾದಿ ಮಧ್ಯೆ ಬಾಲಕಿ ಪ್ರಾಣ ಬಿಟ್ಟಳು ಎನ್ನಲಾಗಿದೆ.

Related posts

ಕೆರೆಯಂಚಿಗೆ ಅಳವಡಿಸಿದ್ದ ತಡೆಗೋಡೆ ಕಂಬದ ನಡುವೆ ಸಿಲುಕಿದ್ದ ಕಾಡಾನೆ..! ಅರಣ್ಯ ಇಲಾಖೆ ಸಿಬ್ಬಂದಿಯಿಂದ ರಕ್ಷಣೆ

ದಕ್ಷಿಣ ಕನ್ನಡ, ಕೊಡಗಿಗೆ ಭಾರಿ ಮಳೆ ಅಪ್ಪಳಿಸುವ ಸಾಧ್ಯತೆ

ಮಂತ್ರವಾದಿಯ ಸಲಹೆ! ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಕೊಂದ ನೆರೆಮನೆಯಾತ! ಇಲ್ಲಿದೆ ದುರಂತ ಕಥೆ!