ಭೋಪಾಲ್: ಪೊಲೀಸರೆಂದರೆ ಕಠೋರ ಮನಸ್ಸಿನವರು, ಕಲ್ಲು ಮನಸ್ಸಿನವರೂ ಅನ್ನುವ ಭಾವನೆ ಸಾರ್ವಜನಿಕರಲ್ಲಿದೆ. ಆದರೆ ಪೊಲೀಸರಲ್ಲೂ ಒಳ್ಳೆಯ ಹೃದಯ ಇದೆ, ಕಷ್ಟ ಎಂದಾಗ ಅವರೂ ಸ್ಪಂದಿಸುತ್ತಾರೆ, ಅವರಿಗೂ ಮಾನವೀಯ ಗುಣಗಳಿರುತ್ತದೆ ಅನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಪ್ರವಾಹ ಬಂದು ಎಲ್ಲ ಕಡೆಯೂ ಬ್ಲಾಕ್ ಆಗಿತ್ತು. ಈ ವೇಳೆ ಆಟೋ ರಿಕ್ಷಾದಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸುತ್ತಲು ನೀರು ತುಂಬಿಕೊಂಡಿದ್ದರಿಂದ ಆಟೋ ರಿಕ್ಷಾಕ್ಕೆ ಮುಂದೆ ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ತಕ್ಷಣ ಸಬ್ ಇನ್ಸ್ ಪೆಕ್ಟರ್ ಅರುಂಧತಿ ರಜಾವತ್ ಮತ್ತು ಪೇದೆ ಇತಿಶ್ರೀ ಸಹಾಯಕ್ಕೆ ಬಂದರು. ನರ್ಸ್ ವೊಬ್ಬರು ಕರೆಯಿಸಿಕೊಂಡು ಆಟೋದಲ್ಲೇ ಹೆರಿಗೆ ಮಾಡಿಸಿದರು. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ. ಪೊಲೀಸರ ಈ ನಡೆಗೆ ಜನರಿಂದ ಶ್ಲಾಘನೆ ವ್ಯಕ್ತವಾಗಿದೆ.