ಕರಾವಳಿ

ಪ್ರವೀಣ್ ಹತ್ಯೆ ಪ್ರಕರಣ: ಆರೋಪಿಗಳು 5 ದಿನ ಪೊಲೀಸ್‌ ಕಸ್ಟಡಿಗೆ

ನ್ಯೂಸ್ ನಾಟೌಟ್ : ಹಿಂದೂ ನಾಯಕ ಹಾಗೂ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರಕರಣದ ಇಬ್ಬರು ಆರೋ ಪಿಗಳಾದ ಝಾಕೀರ್ ಸವಣೂರು ಹಾಗೂ ಶಫೀಕ್ ಬೆಳ್ಳಾರೆಯನ್ನು ಬಂಧಿಸಲಾಗಿತ್ತು. ಮೊನ್ನೆ ಪುತ್ತೂರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿತ್ತು. ಶುಕ್ರವಾರ ಪೊಲೀಸರು ಬಂಧಿತ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಕೇಳಿದ ಹಿನ್ನಲೆಯಲ್ಲಿ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.

Related posts

ಸುಳ್ಯದ ಅಳಿಯ ಬಿಸಿ ರೋಡ್ ನಲ್ಲಿ ವಿಷ ಸೇವನೆ, ತೀವ್ರ ಅಸ್ವಸ್ಥಗೊಂಡಿದ್ದವನು ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರು

ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ದೊರೆಸ್ವಾಮಿ ನಿಧನ

ಉಪ್ಪಿನಂಗಡಿ: ನಿರ್ಮಾಣ ಹಂತದ ಕಟ್ಟಡದಲ್ಲಿ ಮೃತದೇಹ ಪತ್ತೆ..! ಯುವಕ ಕೊಲೆಯಾಗಿರುವ ಸಾಧ್ಯತೆ