ಕರಾವಳಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಫ್ಲ್ಯಾಟ್ ನಲ್ಲಿ ಆವರಿಸಿದ ದಟ್ಟ ಹೊಗೆ:ಸ್ಥಳೀಯರ ನೆರವಿನಿಂದ ೩೦ ಜನರ ರಕ್ಷಣೆ

ನ್ಯೂಸ್ ನಾಟೌಟ್ : ಮಂಗಳೂರಿನ ಬಜಪೆ ಸಮೀಪದ ಕಂದಾವರದ ಫ್ಲ್ಯಾಟ್ ನಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅವಘಡ ಸಂಭವಿಸಿದ್ದು ೩೦ ಜನರನ್ನು ರಕ್ಷಿಸಲಾಗಿದೆ.

30 ಜನರ ರಕ್ಷಣೆ :

ಸರಿಸುಮಾರು ರಾತ್ರಿ ೯.೪೫ರ ಹೊತ್ತು.ಇನ್ನೇನು ನಿದ್ರೆ ಜಾರುವ ಸಮಯ.ಅಷ್ಟೊತ್ತಿಗಾಗಲೇ ಒಮ್ಮಿಂದೊಮ್ಮೆಲೆ ಬೆಂಕಿ ಹೊಗೆ ಆವರಿಸಿಕೊಂಡಿತು.ಮೇಲಿನ ಮಹಡಿಗಳಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿತು.ಸ್ಥಳೀಯರು ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು.ವಿದ್ಯುತ್ ಮೀಟರ್ ಬೋರ್ಡ್ ಸುಟ್ಟು ಹೋಗಿದ್ದರಿಂದ ಈ ಅವಘಡಕ್ಕೆ ಕಾರಣವಾಯಿತು.ಇದು ೧೦ ವರ್ಷ ಹಳೆಯ ಫ್ಲ್ಯಾಟ್ ಆಗಿದ್ದು,೨೧ ಮನೆಗಳಿವೆಯೆಂದು ತಿಳಿದು ಬಂದಿದೆ.

Related posts

ಬೆಳ್ತಂಗಡಿಯಲ್ಲಿ ಭೀಕರ ರಸ್ತೆ ಅಪಘಾತ:ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

ಮಾಜಿ ಸೈನಿಕರಿಗೆ ಸಿಹಿ ಸುದ್ದಿ, ಕೂಡಲೇ ಅರ್ಜಿ ಸಲ್ಲಿಸಿದರೆ ಒಳ್ಳೆ ಅವಕಾಶ..!

ನಿವೃತ್ತ ಅರಣ್ಯಾಧಿಕಾರಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ! ಡೆತ್ ನೋಟ್‌ನಲ್ಲಿತ್ತು ಅಸಲಿ ಕಾರಣ !