ವೈರಲ್ ನ್ಯೂಸ್

ಭಾರತೀಯ ಅಂಚೆ ಇಲಾಖೆಯಲ್ಲಿ ಭರಪೂರ ಉದ್ಯೋಗಾವಕಾಶ, ಎಷ್ಟು ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 1,899 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕ್ರೀಡಾ ಕೋಟದ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಗ್ರೂಪ್​ ಸಿ ಹುದ್ದೆಗಳು ಇವಾಗಿದ್ದು, ದೇಶಾದ್ಯಂತ ಮಕಾತಿ ನಡೆಯಲಿದೆ.

ಪೋಸ್ಟಲ್​ ಅಸಿಸ್ಟೆಂಟ್​​ ಮತ್ತು ಸೋರ್ಟಿಂಗ್​ ಅಸಿಸ್ಟೆಂಟ್​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಶಿಕ್ಷಣ ಪೂರ್ಣಗೊಳಿಸಿರಬೇಕು. ಪೋಸ್ಟ್​​ ಮ್ಯಾನ್​, ಮೆಲ್​ ಗಾರ್ಡ್​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಪೂರ್ಣಗೊಳಿಸಿರಬೇಕು. ಮಲ್ಟಿ ಟಾಸ್ಕಿಂಗ್​ ಸ್ಟಾಫ್​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಶಿಕ್ಷಣ ಪಡೆದಿರಬೇಕು.

ಪೋಸ್ಟಲ್​ ಅಸಿಸ್ಟೆಂಟ್​- 598 ಹುದ್ದೆಗಳು
ಸೋರ್ಟಿಂಗ್​ ಅಸಿಸ್ಟೆಂಟ್-​ 143
ಪೋಸ್ಟಮ್ಯಾನ್​- 585
ಮೇಲ್​ ಗಾರ್ಡ್-​​​ 3
ಮಲ್ಟಿ ಟಾಸ್ಕಿಂಗ್​ ಸ್ಟಾಫ್-​ 570

ಮಲ್ಟಿ ಟಾಸ್ಕಿಂಗ್​ ಸಿಬ್ಬಂದಿ ಹೊರತುಪಡಿಸಿ ಬೇರೆ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18ರಿಂದ ಗರಿಷ್ಠ 27 ವರ್ಷ ವಯೋಮಿತಿ ಹೊಂದಿರಬೇಕು. ಮಲ್ಟಿ ಟಾಸ್ಕಿಂಗ್​ ಸಿಬ್ಬಂದಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18ರಿಂದ ಗರಿಷ್ಠ 25 ವರ್ಷ ಪೂರ್ಣಗೊಳಿಸಿರಬೇಕು.

ಪೋಸ್ಟಲ್​ ಅಸಿಸ್ಟೆಂಟ್​​ ಮತ್ತು ಸೋರ್ಟಿಂಗ್​ ಅಸಿಸ್ಟೆಂಟ್​ ಹುದ್ದೆಗೆ- ₹25,500 ದಿಂದ ₹81,100 ರೂ, ಪೋಸ್ಟ್​​ ಮ್ಯಾನ್​, ಮೆಲ್​ ಗಾರ್ಡ್​ ಹುದ್ದೆಗೆ 21,700 ದಿಂದ 69,100 ರೂ, ಮಲ್ಟಿ ಟಾಸ್ಕಿಂಗ್​ ಸ್ಟಾಫ್​ ಹುದ್ದೆಗೆ 18,000 ದಿಂದ 56,900ರವರೆಗೆ ವೇತನ ನಿಗದಿಪಡಿಸಲಾಗಿದೆ.

ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಇತರೆ ಅಭ್ಯರ್ಥಿಗಳು 100 ರೂ ಅರ್ಜಿ ಶುಲ್ಕ ಭರಿಸಬೇಕು.

ಮೆರಿಟ್​ ಮತ್ತು ದಾಖಲಾತಿ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ. ನವೆಂಬರ್​ 10ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್​ 9 ಕಡೇಯ ದಿನಾಂಕ. ಈ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು indiapost.gov.in ಇಲ್ಲಿಗೆ ಅರ್ಜಿ ಸಲ್ಲಿಸಬಹುದು ಎಂದು ವರದಿ ತಿಳಿಸಿದೆ.

Related posts

ಮಂಗಳೂರಿನಲ್ಲೂ ಮೈತ್ರಿಗೆ ಶಾಕ್..! ಜೆಡಿಎಸ್ ನ 42 ಪದಾಧಿಕಾರಿಗಳು ಕಾಂಗ್ರೆಸ್ ಸೇರ್ಪಡೆ..!

ಶ್ರೀ ರಂಗನಾಥ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದೇಕೆ ಪ್ರಧಾನಿ..? ತಮಿಳುನಾಡಿನ ಈ ಪುರಾತನ ದೇಗುಲಕ್ಕೂ ಅಯೋಧ್ಯ ರಾಮನಿಗೂ ಸಂಬಂಧವೇನು..?

ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಕೂಟಕ್ಕೆ ಟೀಂ ಇಂಡಿಯಾ ತಂಡ ಪ್ರಕಟ, ಯಾರಿದ್ದಾರೆ ತಂಡದಲ್ಲಿ ಇಲ್ಲಿದೆ ಕಂಪ್ಲೀಟ್ ಟೀಂ ಲಿಸ್ಟ್