ಕಾಬೂಲ್: ತಾಲಿಬಾನ್ ಉಗ್ರರು ಆಫ್ಘಾನಿಸ್ತಾನದಲ್ಲಿ ಅಧಿಕಾರ ಸ್ಥಾಪಿಸಿದ ನಂತರ ಅಲ್ಲಿನ ಜನರು ಭಯಭೀತರಾಗಿ ಪಲಾಯನ ಮಾಡುತ್ತಿದ್ದಾರೆ. ಅಂತಹವರ ಸಾಲಿಗೆ ಪಾಪ್ ಗಾಯಕಿ ಆರ್ಯಾನ ಸಯೀದ್ ಕೂಡ ಒಬ್ಬರು. ಅವರು ತಾಲಿಬಾನಿಗಳನ್ನು ಟೀಕಿಸಿದ್ದರು. ಅಫ್ಘಾನ್ ಸೇನೆಯನ್ನು ಬೆಂಬಲಿಸಿ ಮಾತನಾಡುತ್ತಿದ್ದರು. ಇದು ಸಹಜವಾಗಿಯೇ ತಾಲಿಬಾನಿ ಉಗ್ರರ ಕಣ್ಣು ಕೆಂಪಗಾಗಿಸಿತ್ತು. ಸದ್ಯ ಉಗ್ರರ ಕಣ್ಣು ತಪ್ಪಿಸಿ ಅವರು ಪತಿಯೊಂದಿಗೆ ಕತಾರ್‌ಗೆ ತೆರಳಿದ್ದಾರೆ. ನಾನು ಚೆನ್ನಾಗಿದ್ದೇನೆ. ಜೀವಂತವಾಗಿದ್ದೇನೆ ಎಂದು ಅವರು ಇನ್‌ಸ್ಟಾಗ್ರಾಮ್ ನಲ್ಲಿ ಪ್ರಕಟಿಸಿದ್ದಾರೆ.