ದೇಶ-ಪ್ರಪಂಚ

ಆಫ್ಘಾನಿಸ್ತಾನಕ್ಕೆ ನೆರವು ನೀಡುವಂತೆ ಭಾರತೀಯರಲ್ಲಿ ಮನವಿ ಮಾಡಿದ ನಟ ಸೋನು ಸೂದ್ ಮನವಿ

ಮುಂಬೈ: ಕೊರೋನಾ ಅವಧಿಯಲ್ಲಿ ಸಂತ್ರಸ್ತರಿಗೆ ನೆರವಾಗಿದ್ದ ನಟ ಸೋನು ಸೂದ್ ಇದೀಗ ಆಫ್ಘಾನಿಸ್ತಾನದ ಪರ ಧನಿಯೆತ್ತಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆನಲ್ಲಿ ಬರೆದುಕೊಂಡಿರುವ ನಟ ಸೋನು ಸೂದ್ ಆಫ್ಘಾನಿಸ್ತಾನದಲ್ಲಿ ನೆಲೆಸಿರುವ ಭಾರತೀಯರು ಸೇರಿದಂತೆ ಅಲ್ಲಿನ ಜನರಿಗೆ ನಮ್ಮ ನೆರವಿನ ಅಗತ್ಯವಿದೆ ಎಂದಿದ್ದಾರೆ. ಸದ್ಯ ಆಪ್ಘಾನಿಸ್ತಾನ ತಾಲಿಬಾನಿಗಳ ವಶವಾಗಿದ್ದು, ಅಲ್ಲಿನ ಜನ ಸಂಕಷ್ಠದಲ್ಲಿದ್ದಾರೆ. ಭಾರತೀಯರು ಸೇರಿದಂತೆ ಅಲ್ಲಿನ ಜನರ ನೆರವಿಗೆ ನಾವು ಮುಂದಾಗಬೇಕು ಎಂದು ಹೇಳಿದ್ದಾರೆ. ಆಫ್ಘಾನಿಸ್ತಾನ ಜನರ ಸಂಕಷ್ಠಕ್ಕೆ ಇಡೀ ಜಗತ್ತು ಸ್ಪಂದಿಸುವ ಮೂಲಕ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಆಪ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ದೇಶ ತೊರೆಯುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ವಿಮಾನ ನಿಲ್ದಾಣದತ್ತ ಬರುತ್ತಿದ್ದು, ನೂಕು ನುಗ್ಗಲಿಗೆ ಕಾರಣವಾಗುತ್ತಿದೆ. ಈ ಮಧ್ಯೆ ಭಾರತೀಯ ವಾಯುಪಡೆಯ ವಿಶೇಷ ವಿಮಾನವೊಂದು ಇಂದು ಬೆಳಗ್ಗೆ 146 ಭಾರತೀಯ ಹೊತ್ತು ದೆಹಲಿ ಬಳಿಯ ಹಿಂದೋನ್ ಏರ್ ಬೇಸ್ ನಲ್ಲಿ ಇಳಿದಿದೆ.

Related posts

ಕಡಿಮೆ ಮೇವು ಸೇವಿಸಿ ಹೆಚ್ಚು ಹಾಲು ಕೊಡುವ ಬನ್ನಿ ತಳಿ ಎಮ್ಮೆಗೆ ಗಂಡು ಕರು..!

ರಾಧಿಕಾ ಬಗ್ಗೆ ಕೊನೆಗೂ ಮೌನ ಮುರಿದು ಕುಮಾರಸ್ವಾಮಿ ಏನು ಹೇಳಿದ್ರು ಗೊತ್ತಾ..?!ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ..

ಚುನಾವಣಾ ಫಲಿತಾಂಶ ನೋಡುತ್ತಲ್ಲೇ ಆಕ್ರೋಶಗೊಂಡು ಟಿ.ವಿ ಒಡೆದು ಹಾಕಿದ ರಾಷ್ಟ್ರೀಯ ಹಿಂದೂ ಪರಿಷತ್‌ ಅಧ್ಯಕ್ಷ..! ಇಲ್ಲಿದೆ ವೈರಲ್ ವಿಡಿಯೋ