ಕರಾವಳಿಕ್ರೈಂವಿಡಿಯೋವೈರಲ್ ನ್ಯೂಸ್

ದೇವಸ್ಥಾನದಲ್ಲಿ ನಮಾಜ್ ಮಾಡಿದ ತಾಯಿ, ಮಗಳನ್ನು ಬಂಧಿಸಿದ್ದೇಕೆ ಪೊಲೀಸರು? ಮಹಿಳೆ ಮತ್ತು ಮಗಳಿಗೆ ಧರ್ಮಗುರು ಹೇಳಿದ್ದ ರಹಸ್ಯವೇನು? ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್ : ಶಿವ ದೇವಸ್ಥಾನದಲ್ಲಿ ನಮಾಜ್ ಮಾಡಿದ ಆರೋಪದ ಮೇಲೆ 38 ವರ್ಷದ ಮಹಿಳೆ ಮತ್ತು ಆಕೆಯ ಮಗಳನ್ನು ಉತ್ತರ ಪ್ರದೇಶದ ಬರೇಲಿಯಲ್ಲಿ ಭಾನುವಾರ ಬಂಧಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಓರ್ವ ಧರ್ಮಗುರುವನ್ನು ಕೂಡ ಬಂಧಿಸಲಾಗಿದ್ದು, ಶುಕ್ರವಾರ ಈ ಘಟನೆ ನಡೆದಿದೆ ಎಂದು ಆರೋಪಿಸಿ ಕೇಸರಪುರ ಗ್ರಾಮದ ಮುಖ್ಯಸ್ಥನ ಪತಿ ಪ್ರೇಮ್ ಸಿಂಗ್ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಧರ್ಮಗುರುಗಳ ಸಲಹೆಯ ಮೇರೆಗೆ ಮಹಿಳೆ ಮತ್ತು ಅವರ ಮಗಳು ದೇವಸ್ಥಾನದ ಆವರಣದಲ್ಲಿ ನಮಾಜ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣದಲ್ಲಿ ನಜೀರಾ (38) ಆಕೆಯ ಮಗಳು ಸಬೀನಾ (19) ಮತ್ತು ಧರ್ಮಗುರು ಚಮನ್ ಶಾ ಮಿಯಾನ್ ಎಂಬ ಮೂವರನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರೇಮ್ ಸಿಂಗ್ ನೀಡಿದ ದೂರಿನ ಆಧಾರದ ಮೇಲೆ, ಐಪಿಸಿ ಸೆಕ್ಷನ್ 295 ಎ (ಒಂದು ಸಮುದಾಯದ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಕೃತ್ಯ) ಮತ್ತು 120 ಬಿ (ಅಪರಾಧದ ಪಿತೂರಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ಪ್ರಾರಂಭಿಸಲಾಗಿದೆ.

Related posts

ದಕ್ಷಿಣ ಕನ್ನಡ ಸೇರಿ 14 ಕ್ಷೇತ್ರಗಳ ಬಹಿರಂಗ ಪ್ರಚಾರ ಇಂದು(ಎ.24)ಕೊನೆ, ಸಂಜೆಯಿಂದ 144 ಸೆಕ್ಷನ್ ಜಾರಿ

ಖಾಸಗಿ ಬಸ್ ಕಂಡಕ್ಟರ್ ನ ಸಮಯಪ್ರಜ್ಞೆಯಿಂದ ಬದುಕುಳಿದ ಪ್ರಯಾಣಿಕ..! ಬಿದ್ದವನನ್ನು ಒಂದೇ ಕೈಯಲ್ಲಿ ಹಿಡಿದು ರಕ್ಷಿಸಿ ಹೀರೋ ಆದ ಕಂಡಕ್ಟರ್..! ಇಲ್ಲಿದೆ ವೈರಲ್ ವೀಡಿಯೋ

ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ಬಗ್ಗೆ ಸುಳ್ಳು ಸುದ್ದಿ..! ಆರೋಗ್ಯ ಸ್ಥಿತಿ ಗಂಭೀರ