ಕರಾವಳಿ

ಪೊಲೀಸ್ ಸಿಬ್ಬಂದಿ ನೇಣುಬಿಗಿದು ಆತ್ಮಹತ್ಯೆಗೆ ಶರಣು!,ಕಾರಣ ನಿಗೂಢ

ನ್ಯೂಸ್ ನಾಟೌಟ್ : ಪೊಲೀಸ್ ಸಿಬ್ಬಂದಿಯೋರ್ವರು ವಾಸ ಸ್ಥಳದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.ಕೊಲ್ಲಂ ಮೂಲದ ಬೈಜು (54) ಮೃತದುರ್ದೈವಿ.

ಬುಧವಾರ ಕರ್ತವ್ಯಕ್ಕೆ ಹಾಜರಾಗದ ಹಿನ್ನಲೆ ಸಂಜೆ ವೇಳೆ ಪೊಲೀಸ್ ಸಿಬ್ಬಂದಿಗಳು ವಾಸಸ್ಥಳಕ್ಕೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಮುಂದಿನ ಕ್ರಮ ತೆಗೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Related posts

ಕುಂಬ್ರ: ಶೇಖಮಲೆ ತಿರುವಿನಲ್ಲಿ ಭೀಕರ ಅಪಘಾತ, ಬೈಕ್ ಸವಾರರಿಗೆ ಗಂಭೀರ ಗಾಯ

ಕಾಂಗ್ರೆಸ್ ಬಣಗಳ ಮಧ್ಯೆ ಮಾರಾಮಾರಿ ಹೊಡೆದಾಟ

ಅಪ್ಪ ಆಗ್ತಿದ್ದಾರೆ ಕ್ರಿಕೆಟಿಗ ಕೆ.ಎಲ್ .ರಾಹುಲ್..! ಹೆಣ್ಣು ಕೊಟ್ಟ ಮಾವ ನೀಡಿದ ಆ ಸುಳಿವು ಯಾವುದು..?