ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆಗೆ ಹೋದ ಹಿಂಬಾಲಕನಿಗೆ ಚಾಕು ಇರಿತ..! ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್: ರಾಜಕೀಯ ದ್ವೇಷದಿಂದ ಯೂತ್ ಕಾಂಗ್ರೆಸ್ (Congress) ಪ್ರಧಾನ ಕಾರ್ಯದರ್ಶಿಗೆ ಚಾಕು ಇರಿದ ಪ್ರಕರಣ ಕುಣಿಗಲ್ ತಾಲ್ಲೂಕಿನ ನಡೇಮಾವಿನಪುರದಲ್ಲಿ ನಡೆದಿದೆ.

ಡಿ.ಕೆ ಸುರೇಶ್ (D.K Suresh) ನಾಮಪತ್ರ ಸಲ್ಲಿಕೆಗೆ ತೆರಳಿದ್ದಕ್ಕೆ ಚಾಕು ಇರಿಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವೆಂಕಟಗೌಡನಪಾಳ್ಯದ ಕೀರ್ತಿ ಹಲ್ಲೆಗೊಳಗಾದ ಕಾಂಗ್ರೆಸ್ ಮುಖಂಡ ಎಂದು ತಿಳಿದು ಬಂದಿದೆ. ಚಂದ್ರ, ಜಗದೀಶ್ ಹಾಗೂ ಸುನೀಲ್ ಎಂಬ ಮೂವರು, ಡಿ.ಕೆ ಸುರೇಶ್ ನಾಮಪತ್ರ ಸಲ್ಲಿಕೆಗೆ ಯಾಕೆ ತೆರಳಿದ್ದೆ ಎಂದು ಕೀರ್ತಿಯವರ ಬಳಿ ಜಗಳ ಆರಂಭಿಸಿದ್ದಾರೆ.

ಬಳಿಕ ಮೂವರು ಸೇರಿ ಕೀರ್ತಿ ಮೇಲೆ ಚಾಕು, ದೊಣ್ಣೆಯಿಂದ ತೀವ್ರವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಚಾಕು ಇರಿತದಿಂದ ಗಾಯಗೊಂಡ ಕೀರ್ತಿಯನ್ನು ಕುಣಿಗಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಐಸಿಸ್ ಮಾದರಿಯಲ್ಲಿ ನೇಹಾ ಕುತ್ತಿಗೆಗೆ ಚಾಕು ಹಾಕಿ ಕೊಲೆ, ಶ್ರೀರಾಮ ಸೇನೆ ನಾಯಕ ಪ್ರಮೋದ್ ಮುತ್ತಾಲಿಕ್ ಗಂಭೀರ ಆರೋಪ

ಕಳ್ಳರನ್ನು ಬಂಧಿಸಲು ಹೊರಟ ಪೊಲೀಸರ ಮೇಲೆ ದಾಳಿ..! ಪೊಲೀಸ್‌ ಜೀಪ್‌ಗೆ ಕಲ್ಲು ತೂರಿ ಪರಾರಿಯಾದ ಖತರ್ನಾಕ್‌ ಗ್ಯಾಂಗ್

“ಆ ನಿರ್ದೇಶಕ ನನ್ನನ್ನು ಹೊಟೇಲ್‌ ರೂಮ್‌ ಗೆ ಕರೆದಿದ್ದ..!” ಸಿನಿ ಜರ್ನಿಯ ಕರಾಳ ನೆನಪೊಂದನ್ನು ಬಿಚ್ಚಿಟ್ಟ ‌ʼಡರ್ಟಿ ಪಿಕ್ಚರ್‌ʼ ನಟಿ !