Uncategorized

ಫೋನ್ ಪೇ ಮೂಲಕ ಲಂಚ ಕೇಳಿದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅಮಾನತು

ತುಮಕೂರು:  ಪೋನ್ ಪೇ ಮೂಲಕ ಲಂಚ ಕೇಳಿದ ತುಮಕೂರಿನ ಗುಬ್ಬಿ ಪೊಲೀಸ್‌ ಸಬ್‌ ಇನ್ಸ್ ಪೆಕ್ಟರ್ ಅಮಾನತು ಮಾಡಲಾಗಿದೆ.  ಗುಬ್ಬಿ ಪೊಲೀಸ್ ಠಾಣೆಯ ಪಿಎಸ್ ಐ ಜ್ಞಾನಮೂರ್ತಿ ಸಸ್ಪೆಂಡ್ ಆದವರಾಗಿದ್ದಾರೆ.   ಕಳೆದ ವಾರ ವಿನಾಕಾರಣ ಮ್ಯಾಕ್ಸಿಕ್ಯಾಬ್ ತಡೆದು ಕಿರುಕುಳ ನೀಡಿದ್ದ ಆರೋಪ ಎದುರಿಸುತ್ತಿದ್ದ ಪಿಎಸ್ಐ ಜ್ಞಾನಮೂರ್ತಿ  ಕ್ಯಾಬ್ ಚಾಲಕನಿಂದ 7 ಸಾವಿರ ರೂ ಫೋನ್ ಪೇ ಮೂಲಕ ಹಣ ಪಡೆದಿದ್ದರೆನ್ನಲಾಗಿದೆ.   ಜೀಪ್ ಚಾಲಕ ಕರಿಯಪ್ಪರ ನಂಬರ್ ಗೆ ಫೋನ್ ಪೇ ಮಾಡಿಸಿಕೊಂಡದ್ದ ಪಿಎಸ್ ಐ ಜ್ಞಾನ ಮೂರ್ತಿ ವಿರುದ್ಧ ದೌರ್ಜನ್ಯ ಮಾಡಿದ್ದಾರೆಂದು ಆರೋಪಿಸಿ  ಪ್ರತಿಭಟನೆ ನಡೆಸಲಾಗಿತ್ತು. ಚಾಲಕರು ಕರಿಯಪ್ಪ ವಿರುದ್ಧ ಪ್ರತಿಘಟನೆ ನಡೆಸಿದ್ದರು. ಈ ಪ್ರಕರಣ ಸಂಬಂಧ ಪಿಎಸ್ಐ ಅಮಾನತು ಮಾಡಿ ತುಮಕೂರು ಎಸ್ ಪಿ ರಾಹುಲ್ ಕುಮಾರ್ ಶಹಾಪುರ್ ಆದೇಶ ನೀಡಿದ್ದಾರೆ.

Related posts

ಮಂಗಳೂರಿನಿಂದ ಯುಎಇ ಗೆ ತೆರಳಲಿರುವ ವಿಮಾನ ಪ್ರಯಾಣಿಕರಿಗೆ ನಾಗರಿಕ ವಿಮಾನಯಾನ ಪ್ರಾಧಿಕಾರದಿಂದ ಸಿಹಿ ಸುದ್ದಿ

ಬೆಳಗ್ಗಿನಿಂದಲೇ ಮೈಸೂರು ಸಂಪರ್ಕಿಸುವ  ಹೆದ್ದಾರಿ ಬಂದ್

ಕಾರ್ಕಳ: ರೇಪ್ ಕೇಸ್ ಬಗ್ಗೆ ಉಡುಪಿ ಎಸ್‌ ಪಿ ಹೇಳಿದ್ದೇನು..? ಆಸ್ಪತ್ರೆಯಲ್ಲಿರುವ ಸಂತ್ರಸ್ತೆಯಿಂದ ಹೇಳಿಕೆ ದಾಖಲು..!