ಕರಾವಳಿ

ಈಶ್ವರ ಮಂಗಲದ ಪೂರ್ಣ ಪ್ರಜ್ಞ ರಿಗೆ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್, ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್ ಗೌರವ

29

ಪುತ್ತೂರು: ಈಶ್ವರ ಮಂಗಲದ ಪೂರ್ಣ ಪ್ರಜ್ಞ ಎಸ್.ಎನ್‌. ಅವರು ರೂಬಿಕ್ ಕ್ಯೂಬ್ ವಿನ್ಯಾಸದಲ್ಲಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್, ಏಷ್ಯಾ ಬುಕ್‌ ಆಫ್ ರೆಕಾರ್ಡ್ಸ್ ಮಾಡಿದ್ದಾರೆ.

ಬೆಂಗಳೂರಿನ ಪೃಥ್ವಿ ಮೊಸೈಕ್ಸ್ ತಂಡದಿಂದ ಕೂಟವನ್ನು ವರ್ಚುವಲ್‌ ಕಾರ್ಯಕ್ರಮದ ಮೂಲಕ ಆಯೋಜಿಸಲಾಗಿತ್ತು. ಮೊದಲ ಸಲ ಆನ್‌ ಲೈನ್‌ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ವಿಶೇಷವಾಗಿತ್ತು. ಈಶ್ವರ ಮಂಗಲದ ಪೂರ್ಣಾತ್ಮರಾಮ ಮತ್ತು ಜಯಂತಿ ದಂಪತಿ ಪುತ್ರಿಯಾದ ಪೂರ್ಣ ಪ್ರಜ್ಞರವರು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾರೆ.

ಇವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಚತುರ್ವೇದ ಸೇಠ್ ರವರ ಮಾರ್ಗದರ್ಶನದಲ್ಲಿ ಪಕ್ಷಿ, ಕೀಟ ಮತ್ತು ಚಿಟ್ಟೆಗಳ ಅಧ್ಯಯನ ಮಾಡುತ್ತಿದ್ದಾರೆ. ಅದೇ ರೀತಿ ಹಾವೇರಿಯ ಮೂಲತೇಶ್ ಗರಡಿ ಮನಿಯವರಿಂದ ಟಿಕುಳಿ ಕಲಾಕೃತಿಗಳ ರಚನೆ ಹಾಗೂ ಪೃಥ್ವಿಕ್ ಭಟ್ ಇವರಿಂದ ಕ್ಯೂಬಿಂಗ್ ತರಬೇತಿ ಪಡೆಯುತ್ತಿದ್ದಾರೆ.