ಬೆಂಗಳೂರು

ಜಗತ್ತಿನಲ್ಲಿ ಕೆಟ್ಟ ತಾಯಿ ಇಲ್ಲ ಎಂಬ ಮಾತಿಗೆ ಲೋಪ ಇವಳು, ಹೆತ್ತ ಕುಡಿಯನ್ನೇ ಕೊಂದ ಪಾಪಿ ತಾಯಿ

ಬೆಂಗಳೂರು: ಜಗತ್ತಿನಲ್ಲಿ ಕೆಟ್ಟ ತಾಯಂದಿರು ಇರಲಾರರು ಎಂಬ ಗಾದೆ ಮಾತೊಂದಿದೆ. ಕರುಳ ಕುಡಿಗೆ ಹೆತ್ತಮ್ಮ ಏನು ಬೇಕಾದರೂ ಮಾಡಬಲ್ಲಳು. ಆದರೆ ಅದಕ್ಕೆ ತದ್ವಿರುದ್ದ ಎಂಬಂತೆ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.ಅನೈತಿಕ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿರುವ 10 ವರ್ಷದ ಮಗನನ್ನೇ ಕೊಂದಿರುವ ಹೃದಯ ವಿದ್ರಾವಕ ಘಟನೆಯಿದು. ಹತ್ತು ವರ್ಷದ ಬಾಲಕನಿಗೆ ದೈಹಿಕ ಹಿಂಸೆ ನೀಡಿ ಕೊಲೆ ಮಾಡಲಾಗಿದೆ.

ನಗರದ ಮೈಕೋ ಲೇಔಟ್​ನಲ್ಲಿ ಈ ಘಟನೆ ನಡೆದಿದ್ದು, ಬಾಲಕನ ತಾಯಿಯೂ ಪ್ರಕರಣದಲ್ಲಿ ಭಾಗಿಯಾಗಿರುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಬಾಲಕನ ತಾಯಿ, ರೌಡಿ ಶೀಟರ್​ ಸುನೀಲ್​ ಹಾಗೂ ಆತನ ಪ್ರೇಯಸಿ ಸಿಂಧು ಪ್ರಕರಣದ ಆರೋಪಿಗಳಾಗಿದ್ದು, ಪೊಲೀಸ್​ ತನಿಖೆ ವೇಳೆ ಕೊಲೆ ಹಿಂದಿನ ರಹಸ್ಯ ಬಯಲಾಗಿದೆ.ಗಂಡನಿಂದ ದೂರವಿದ್ದ ಬಾಲಕನ ತಾಯಿ ರೌಡಿ ಶೀಟರ್​ ಸುನೀಲ್​ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಮಗನಿಗೆ ಈ ವಿಚಾರ ತಿಳಿದು ಪದೇ ಪದೇ ಪ್ರಶ್ನಿಸುತ್ತಿದ್ದ ಎಂದು ಮೂವರು ಸೇರಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಬಾಲಕನ ತಾಯಿ ಸಂಬಂಧಿಕರು ಮಗನ ಬಗ್ಗೆ ಹಲವು ಬಾರಿ ವಿಚಾರಿಸಿದ ಕಾರಣ ಮೈಕ್ರೋ ಲೇಔಟ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾಳೆ. ಈ ಹಿಂದೆ ರೌಡಿಶೀಟರ್​ ಸುನೀಲ್​ ಹಾಗೂ ಆತನ ಪ್ರೇಯಸಿ ಸಿಂಧು ಮಾತ್ರ ಪ್ರಕರಣದ ಆರೋಪಿಗಳೆಂದು ಬಿಂಬಿಸಲಾಗಿತ್ತು. ಆದರೆ ಪೊಲೀಸರು ತೀವ್ರ ತನಿಖೆ ನಡೆಸಿದಾಗ ತಾಯಿಯೂ ಕೊಲೆಯಲ್ಲಿ ಭಾಗಿಯಾಗಿರುವ ವಿಚಾರ ಬಯಲಾಗಿದೆ.

Related posts

‘ಮುಸ್ಲಿಂ ಹುಡುಗಿಯರನ್ನು ಲವ್ ಮಾಡಿ ಮತಾಂತರ ಮಾಡಬೇಕಾಗುತ್ತೆ, ಹಿಂದೂ ಯುವಕರಿಗೂ ಗಂಡಸ್ತನವಿದೆ’ ಆರೂಢ ಭಾರತೀ ಸ್ವಾಮೀಜಿ ಪ್ರಚೋಧನಕಾರಿ ಭಾಷಣ

ಮದ್ಯಪಾನ ಮಾಡಿ ಶಾಲಾ ವಾಹನ ಓಡಿಸಿದ್ರಾ ಚಾಲಕರು..? 16 ಚಾಲಕರ ವಾಹನ ಪರವಾನಗಿ ಪತ್ರ ಆರ್.​ಟಿ.ಒ ಗೆ ರವಾನೆ

ನಳಿನ್ ಕುಮಾರ್ ಕಟೀಲ್ ‘ಕಾಮಿಡಿ ಕಿಲಾಡಿ’, ಅಧ್ಯಕ್ಷಗಿರಿಯನ್ನು ಸಂತೋಷ್ ಪಾದರಕ್ಷೆಗಳಿಗೆ ಲೀಸ್ ನೀಡಿದ್ರು..!