ಕರಾವಳಿ

ಅಕ್ರಮ ಮರಳುಗಾರಿಕೆ ಅಡ್ಡೆಗೆ ಪೊಲೀಸರ ದಾಳಿ,ಮರಳುಗಳ್ಳರಿಗೆ ಭಯಹುಟ್ಟಿಸಿದ ಖಾಕಿ

262

ಬೆಳ್ತಂಗಡಿ: ಚಾರ್ಮಾಡಿಯಲ್ಲಿ ಪರವಾನಿಗೆ ಇಲ್ಲದೆ ಸಾಗಿಸುತಿದ್ದ ಅಕ್ರಮ ಮರಳು ಸಾಗಾಟದ ಲಾರಿಯನ್ನು ಧರ್ಮಸ್ಥಳ ಪೊಲೀಸರು ವಶ ಪಡಿಸಿಕೊಂಡ ಘಟನೆ ಚಾರ್ಮಾಡಿಯಲ್ಲಿ ನಡೆದಿದೆ.

ಚಾರ್ಮಾಡಿಯಲ್ಲಿ ವಾಹನಗಳನ್ನು ತಪಾಸಣೆಗೈಯುತ್ತಿರುವ ವೇಳೆ ಮುನೀರ್ ಎಂಬತನಿಗೆ ಸೇರಿದ KA-19-AB-9516 ಸಂಖ್ಯೆಯ ಸುಲ್ತಾನ್ ಎಂಬ ಹೆಸರಿನ ಲಾರಿಯೊಂದನ್ನು ನಿಲ್ಲಿಸಿ ತಪಾಸಣೆ ಮಾಡುವಾಗ ಅದರಲ್ಲಿ ಯಾವುದೇ ಸರಕಾರಕ್ಕೆ ಉಪ ಖನಜ ಪಾವತಿ ಮಾಡದೆ ಪರವಾನಿಗೆ ಪಡೆಯದೆ ಅಕ್ರಮ ಮರಳು ಸಾಗಿಸುತ್ತಿರುವುದು ಪತ್ತೆಯಾಗಿದೆ.

ಲಾರಿ ಚಾಲಕ ಅನ್ಸರ್ ಎಂಬಾತನಲ್ಲಿ ಮರಳು ಸಾಗಾಟದ ಪರವಾನಿಗೆ ಹಾಗೂ ದಾಖಲೆಗಳನ್ನು ಕೇಳಿದಾಗ ಯಾವುದೇ ದಾಖಲೆಗಳಿಲ್ಲ ಎಂದಿದ್ದು ಅದರಂತೆ ಲಾರಿಯನ್ನು ವಶಪಡಿಸಿಕೊಂಡ ಧರ್ಮಸ್ಥಳ ಪೊಲೀಸರು ಮುಂದಿನ ಕ್ರಮಕ್ಕಾಗಿ ಗಣಿ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.
ತಪಾಸಣೆ ವೇಳೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಡಿ, ಸಿಬ್ಬಂದಿಯಾದ ಪ್ರಶಾಂತ್, ಮಲ್ಲಿಕಾರ್ಜುನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

See also  ಮಂಗಳೂರು: 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ..! ಆಹಾರದ ಸ್ಯಾಂಪಲ್ ತಪಾಸಣೆ ಕೊಂಡೊಯ್ದ ಅಧಿಕಾರಿಗಳು
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget