ದೇಶ-ಪ್ರಪಂಚ

ಪ್ರಧಾನಿ ಮೋದಿ ದುರಹಂಕಾರಿ: ರೈತರು ನನಗಾಗಿ ಸತ್ತಿದ್ದಾರೆಯೇ ಅಂದಿದ್ರು..!

ನವದೆಹಲಿ: ವಿಶ್ವ ನಾಯಕ ಎಂದು ಕರೆಯಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಈಗ ಮಹಾ ದುರಹಂಕಾರಿ ಎಂಬ ಆರೋಪ ಹೊತ್ತಿದ್ದಾರೆ. ಇಂತಹ ಆರೋಪವನ್ನು ಮಾಡಿರುವುದು ಬೇರೆ ಯಾರು ಅಲ್ಲ, ತಮ್ಮದೇ ಪಕ್ಷದ ನಾಯಕರಾಗಿರುವ ಮೇಘಾಲಯದ ರಾಜ್ಯಪಾಲ ಸತ್ಯಪಾಲ್ ಮಲೀಕ್. ಹೌದು, ಇಂತಹದ್ದೊಂದು ಗಂಭೀರ ಆರೋಪವನ್ನು ಸತ್ಯಪಾಲ್ ಮಾಡಿರುವುದು ಸ್ವತಃ ಕಮಲ ಪಾಳಯವನ್ನು ತೀವ್ರ ಮುಜುಗರಕ್ಕೀಡು ಮಾಡಿದೆ.

ರಾಜ್ಯಪಾಲರ ಆರೋಪವೇನು?

ಇತ್ತೀಚೆಗೆ ದೆಹಲಿಯಲ್ಲಿ ರೈತರು ನಡೆಸಿದ ಪ್ರತಿಭಟನೆಯ ಬಗ್ಗೆ ಚರ್ಚಿಸಲು ಪ್ರಧಾನಿ ಬಳಿ ತೆರಳಿದ್ದೆ. ಆ ವೇಳೆ ಅವರು ನನ್ನ ಜತೆ ದುರಹಂಕಾರದಿAದ ನಡೆದುಕೊಂಡರು. ನಾನು ನಮ್ಮವರೇ ರೈತರು ೫೦೦ ಮಂದಿ ಸತ್ತಿದ್ದಾರೆ ಎಂದು ಹೇಳಿದಾಗ ಮೋದಿಯವರು ಅದಕ್ಕೆ ರೈತರು ನನಗಾಗಿ ಸತ್ತಿದ್ದಾರೆಯೇ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ನಾನು ನೀವು ದೊರೆಯಾಗಿರುವುದರಿಂದ ನಿಮಗಾಗಿಯೇ ಸತ್ತಿದ್ದಾರೆ ಎಂದೆ ನಂತರ ಅವರ ಜತೆ ಮಾತನಾಡುವುದನ್ನು ನಿಲ್ಲಿಸಿದೆ ಎಂದು ತಿಳಿಸಿದ್ದಾರೆ.

ಯಾರಿವರು ಸತ್ಯಪಾಲ್ ಮಲಿಕ್?

ಸತ್ಯಪಾಲ್ ಮಲೀಕ್ ಉತ್ತರ ಪ್ರದೇಶ ಮೂಲದ ಹಿರಿಯ ರಾಜಕಾರಣಿ. ಹಲವು ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಭಾರತೀಯ ಜನತಾ ಪಕ್ಷದ ನಾಯಕ. ಪ್ರಸ್ತುತ ಅವರು ಮೇಘಾಲಯದ ೨೧ನೇ ಗವರ್ನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಆಗಸ್ಟ್ ೧೮ರಿಂದ ಅಕ್ಟೋಬರ್ ೧೯ರ ತನಕ ಜಮ್ಮು –ಕಾಶ್ಮೀರದ ಗವರ್ನರ್ ಆಗಿದ್ದರು. ಇವರ ಅಧಿಕಾರಿಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಜಮ್ಮು –ಕಾಶ್ಮೀರದ ವಿಶೇಷ ಸ್ಥಾನಮಾನ ನೀಡುವ ೩೭೦ನೇ ವಿಧಿಯನ್ನು ರದ್ದು ಮಾಡಲಾಗಿತ್ತು. ದೆಹಲಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದಿದ್ದಕ್ಕೆ ನೋವಾಗಿದೆ. ಒಂದು ವೇಳೆ ನನ್ನ ಈ ಅಭಿಪ್ರಾಯದ ಬಗ್ಗೆ ಪಕ್ಷ ಆಕ್ಷೇಪ ಎತ್ತಿದರೆ, ರಾಜ್ಯಪಾಲ ಹುದ್ದೆಯನ್ನು ತೊರೆದು ಹೊರಗಿನಿಂದ ರೈತರ ಪರವಾಗಿ ದನಿ ಎತ್ತುತ್ತೇನೆ ಎಂದು ಮಲಿಕ್ ಹೇಳಿದ್ದನ್ನು ಸ್ಮರಿಸಬಹುದು.

Related posts

ಮೇ 3ರ ಮಧ್ಯರಾತ್ರಿ ಪ್ರಜ್ವಲ್‌ ರೇವಣ್ಣ ಬೆಂಗಳೂರಿಗೆ, ಬಂದ ತಕ್ಷಣ ಬಂಧನ..?

ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಯೊಬ್ಬರು ಪ್ರೆಗ್ನೆಂಟ್‌ ವಿಚಾರ..! ಪ್ರೆಗ್ನೆಂಟ್ ಆಗಿದ್ದು ನಿಜವೇ..? ರಿಪೋರ್ಟ್‌ ಏನು ಹೇಳುತ್ತೆ?

ಆರ್ಥಿಕ ವರ್ಷದ ಆರಂಭದಲ್ಲಿ ಗುಡ್​ ನ್ಯೂಸ್​, ಗ್ಯಾಸ್ ಸಿಲಿಂಡರ್​​ ಬೆಲೆ ಇಳಿಕೆ