ಬೆಂಗಳೂರುವೈರಲ್ ನ್ಯೂಸ್

ವಸತಿ ನಿಲಯ(ಪಿಜಿ)ಗಳಲ್ಲಿರುವವರಿಗೆ ಐಡಿ ಕಾರ್ಡ್ ಕಡ್ಡಾಯ..? ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ

ನ್ಯೂಸ್ ನಾಟೌಟ್: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಪಿಜಿಗಳಲ್ಲಿ ಹೊಸ ನಿಯಮಗಳು ಜಾರಿಯಾಗಲಿವೆ ಎಂದು ವರದಿ ತಿಳಿಸಿದೆ.
ಪಿಜಿಗಳಿಗೆ ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟಿಸುತ್ತಿದ್ದಂತೆ ಪಿಜಿ ಅಸೋಸಿಯೇಷನ್ ಹೊಸ ನಿರ್ಧಾರಕ್ಕೆ ಬಂದಿದ್ದು, ಪೊಲೀಸರಿಗೆ ನೆರವಾಗಲು ಹಾಗೂ ಪಿಜಿಯಲ್ಲಿದ್ದವರ ಸುರಕ್ಷತೆಗೆ ಐಡಿ ಕಾರ್ಡ್ ವ್ಯವಸ್ಥೆಯನ್ನು ಜಾರಿ ಮಾಡಲು ಮುಂದಾಗಿದೆ.

ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಹಾಗೂ ಪಿಜಿ ನಿವಾಸಿಗಳ ಸುರಕ್ಷತೆ, ಭದ್ರತೆಯ ವಿಚಾರಕ್ಕೆ ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟ ಮಾಡಲಾಗಿತ್ತು. ಇದೀಗ ಪೊಲೀಸರಿಗೆ ಸಹಾಯಕಾರಿಯಾಗಲು ಪಿಜಿ ಅಸೋಸಿಯೇಷನ್ ಮತ್ತಷ್ಟು ಸ್ಮಾರ್ಟ್ ಪ್ಲ್ಯಾನ್ ಮಾಡಿದೆ. ಪಿಜಿಯಲ್ಲಿ ವಾಸ ಮಾಡುವವರಿಗೆ ಇನ್ಮುಂದೆ ಪಿಜಿ ಅಡ್ಮಿಶನ್‌ನ ಐಡಿ ಕಾರ್ಡ್‌ ನೀಡಲು ಚಿಂತನೆ ನಡೆಸುತ್ತಿದೆ. ಜೊತೆಗೆ ಫ್ಯಾಮಿಲಿ ಹಾಗೂ ಸ್ನೇಹಿತರ ಫೋನ್ ನಂಬರ್‌ಗಳನ್ನು ಸಂಗ್ರಹಿಸಿಕೊಳ್ಳಲು ಮುಂದಾಗಿದೆ.

ನಗರದಲ್ಲಿ 25 ಸಾವಿರಕ್ಕೂ ಅಧಿಕ ಪಿಜಿಗಳಿವೆ. ಪಾಲಿಕೆ, ಬೆಸ್ಕಾಂ, ಜಲಮಂಡಳಿ ಪ್ರಕಾರ 50 ಸಾವಿರಕ್ಕೂ ಅಧಿಕ ಪಿಜಿಗಳಿವೆ. ಪೊಲೀಸರ ತನಿಖೆ ಹಾಗೂ ಪಿಜಿ ವಾಸಿಗಳ ಸುರಕ್ಷತೆಯ ನಿಟ್ಟಿನಲ್ಲಿ ಆಯಾ ಪಿಜಿಗಳಲ್ಲಿ ಅಡ್ಮಿಷನ್ ಐಡಿ ಕಾರ್ಡ್ ವಿತರಿಸಿ ಅದನ್ನು ಪ್ರತಿ ತಿಂಗಳಿಗೊಮ್ಮೆ ರಿನಿವಲ್ ಮಾಡೋಕೆ ಪಿಜಿ ಅಸೋಸಿಯೇಷನ್ ನಿರ್ಧರಿಸಿದೆ. ಪಿಜಿ ಅಸೋಸಿಯೇಷನ್ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಈ ಪ್ಲ್ಯಾನ್ ಅನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ.

Related posts

ಬಿಜೆಪಿ 400 ಸ್ಥಾನಗಳನ್ನು ಪಡೆಯಲಿದೆ ಎಂದ ಮಲ್ಲಿಕಾರ್ಜುನ್ ಖರ್ಗೆ..! ಬಿದ್ದು,ಬಿದ್ದು ನಕ್ಕ ಬಿಜೆಪಿ ನಾಯಕರು..! ಇಲ್ಲಿದೆ ವಿಡಿಯೋ

ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ಚಾಕು ಇರಿತ..! ಮನೆಗಳ್ಳತನಕ್ಕೆ ಬಂದಿದ್ದವನಿಂದ ಕೃತ್ಯ, ನಟ ಆಸ್ಪತ್ರೆಗೆ ದಾಖಲು..!

12 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ..! ಶ್ರೀಲಂಕಾ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಶಾಕಿಂಗ್ ಮಾಹಿತಿ ಬಯಲು..!