ಕ್ರೈಂವೈರಲ್ ನ್ಯೂಸ್

Bike taxi: ಪೆಟ್ರೋಲ್‌ ಖಾಲಿಯಾದ್ರೂ ಬೈಕ್‌ನಿಂದ ಇಳಿಯದ ಗ್ರಾಹಕ..! ಗ್ರಾಹಕನ ಸಮೇತ ದೂಡಿಕೊಂಡೇ ನಡೆದ ಚಾಲಕ

ನ್ಯೂಸ್‌ ನಾಟೌಟ್‌: ಹಲವರು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ಸ್ವಾರ್ಥಿಗಳಾಗಿ ಮತ್ತು ಅಮಾನವೀಯವಾಗಿ ವರ್ತಿಸುವವವರ ಬಗ್ಗೆ ಆಗಾಗ ಸುದ್ದಿಯಾಗುತ್ತಿರುತ್ತದೆ.

ಇಲ್ಲೊಂದು ಅಂತಹದ್ದೇ ಘಟನೆ ವರದಿಯಾಗಿದ್ದು, ಸ್ಕೂಟಿಯಲ್ಲಿ ಪೆಟ್ರೋಲ್‌ ಖಾಲಿಯಾದರೂ ಕೆಳಗೆ ಇಳಿಯಲು ಗ್ರಾಹಕ ನಿರಾಕರಿಸಿದ ಕಾರಣ ಬೈಕ್‌ ಟ್ಯಾಕ್ಸಿ ಚಾಲಕನೊಬ್ಬ ಗ್ರಾಹಕನ ಜೊತೆ ದ್ವಿಚಕ್ರ ವಾಹನವನ್ನು ತಳ್ಳಿಕೊಂಡೆ ನಡೆದಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಈಗ ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ.

ಸ್ಕೂಟಿಯಲ್ಲಿ ಪೆಟ್ರೋಲ್‌ ಖಾಲಿಯಾಗಿದೆ. ಆಗ ಗ್ರಾಹಕನು ವಾಹನದಿಂದ ಇಳಿಯಲು ನಿರಾಕರಿಸಿದ್ದಾನೆ. ಇದರಿಂದ ಅನಿವಾರ್ಯವಾಗಿ ಬೈಕ್‌ ಟ್ಯಾಕ್ಸಿ ಚಾಲಕ ಹತ್ತಿರದ ಪೆಟ್ರೋಲ್‌ ಬಂಕ್‌ಗೆ ಗ್ರಾಹಕ ಇರುವಂತೆ ಗಾಡಿಯನ್ನು ತಳ್ಳಿಕೊಂಡು ಹೋಗಿದ್ದಾನೆ.

ಇದನ್ನು ಅದೇ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನೆಟ್ಟಿಗರು ಗ್ರಾಹಕನ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Related posts

ಪುತ್ತೂರು: ಅಡ್ಡಾದಿಡ್ಡಿ ಓಡಿಸಿ ಲಾರಿಗೆ ಗುದ್ದಿದ ಸ್ಕೂಟರ್..! ಪೊಲೀಸ್ ಠಾಣೆ ಮೆಟ್ಟಿಲೇರಿದ ಲಾರಿ ಚಾಲಕ

ಕಪ್ಪು ಬಣ್ಣದವ ಎಂದು ಟೀಕೆಗೊಳಗಾಗಿದ್ದ ವ್ಯಕ್ತಿಯನ್ನೇ ಮದುವೆಯಾದಳು ಆ ಸುಂದರಿ ನಟಿ..! ಬಣ್ಣಕ್ಕೂ ಮಿಗಿಲಾದ ಪ್ರೀತಿಯ ನಂಬಿಕೆ ಸುಳ್ಳಾಗಲಿಲ್ಲ, ಪ್ರೀತಿಸಿದ ಹುಡುಗನ ಸಾಧನೆಗೆ ಈಗ ಸಿಕ್ಕಿತು ಬಿಗ್ ಸಕ್ಸಸ್..!

ಫೇಲ್ ಆದದ್ದಕ್ಕೆ ಕೆರೆಗೆ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ..! ಹೆದರಿ ತಂದೆಯ ನಂಬರ್ ಬ್ಲಾಕ್ ಮಾಡಿದ್ದ ಮಗ..!