ಕೊಡಗು

ಪೆರಾಜೆ:ಶ್ರೀ ವಯನಾಟ್ ಕುಲವನ್ ದೈವಸ್ಥಾನದ ದೈವಂಕಟ್ಟು ಮಹೋತ್ಸವ, ಮಾರ್ಚ್ 3,4,5ರಂದು ನಡೆಯಲಿರುವ ಅದ್ದೂರಿ ಕಾರ್ಯಕ್ರಮ

ನ್ಯೂಸ್ ನಾಟೌಟ್ :ವಯನಾಟ್ ಕುಲವನ್ ದೈವಸ್ಥಾನದ ಮಹೋತ್ಸವ ಮತ್ತು ದೈವಕಂಟ್ಟು ಮಹೋತ್ಸವ ಪೆರಾಜೆಯ ಕುಂಬಳಚೇರಿಯಲ್ಲಿ ಮೂರು ದಿನಗಳ ಕಾಲ ನಡೆಯಲಿದೆ.ಮಾರ್ಚ್ 3,4,5ರಂದು ನಡೆಯಲಿರುವ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಊರ-ಪರವೂರಿನ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಹಲವು ವರ್ಷಗಳ ಬಳಿಕ ನಡೆಯುತ್ತಿರುವ ಈ ವೈಭವದ ಕಾರ್ಯಕ್ರಮಕ್ಕೆ ಈಗಾಗಲೇ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ.ಮಾರ್ಚ್ 3 ರಂದು ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆಯಿಂದ ಹಸಿರುವಾಣಿ ಹೊರಡಲಿದೆ. ಸಂಜೆ 5 ಗಂಟೆಗೆ ದೈವದ ಕಾರ್ಯಕ್ರಮ ಅರಂಭವಾಗಲಿದೆ.ಕೈವಿದ್, ದೈವಗಳ ಕೊಡುವಿಕೆ ಮತ್ತು ಪೊಟ್ಟನ್ ದೈವ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಮಾರ್ಚ್ 4 ರಂದು ಬೆಳಗ್ಗೆ ಕೊರತಿಯಮ್ಮ ದೈವ, ಚಾಮುಂಡಿ ದೈವ, ವಿಷ್ಣುಮೂರ್ತಿ ದೈವ , ಗುಳಿಗ ದೈವದ ಕೋಲ , ಕಾರ್ನೋನ್ ದೈವದ ವೆಳ್ಳಾಟಂ, ಕೋರಚ್ಚನ್ ದೈವದ ವೆಳ್ಳಚ್ಚಾಟಂ , ಕಂಡನಾರ್ ಕೇಳನ್ ದೈವದ ವೆಳ್ಳಾಟಂ, ವಿಷ್ಣುಮೂರ್ತಿ ದೈವದ ಆರಂಭ ,ವಯನಾಟ್ ಕುಲವನ್ ವೆಳ್ಳಚ್ಚಾಟಂ ನಡೆಯಲಿದೆ.

ಮಾರ್ಚ್ 5ರಂದು ಕಾರ್ನೋನ್ ದೈವ, ಕೋರಚ್ಚನ್ ದೈವ ,ಕಂಡನಾರ್ ಕೇಳನ್ ದೈವ , ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ ಮತ್ತು ಸೂಟೆ ಸಮರ್ಪಣೆ , ಮಹಾವಿಷ್ಣು ಮೂರ್ತಿ ದೈವದ ಅಂಗಣ ಪ್ರವೇಶ ಮರ ಪಿಳರ್ಕಲ್ ,ನಂತರ ಕೈವೀದ್ ಕಾರ್ಯಕ್ರಮಗಳೊಂದಿಗೆ ಮುಕ್ತಾಯವಾಗಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ಮತ್ತು ಸದಸ್ಯರು ತಿಳಿಸಿದ್ದಾರೆ.

Related posts

ಊರುಬೈಲಿನ ರಾಜೇಶ್ ನಿಡಿಂಜಿ ನಿಧನ

ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಎನ್‌ಎಂಸಿ ವಿದ್ಯಾರ್ಥಿಗೆ ಅವಕಾಶ

ಕೊಡಗು ಗ್ರಾಮ ಪಂಚಾಯತ್‌ ಚುನಾವಣೆ ವೇಳಾ ಪಟ್ಟಿ ಪ್ರಕಟ