ಕೊಡಗು

ಪೆರಾಜೆ: ಕಾಡು ಪ್ರಾಣಿ ಎಂದು ಸಾಕು ನಾಯಿಗೆ ಗುಂಡಿಟ್ಟ ಬೇಟೆಗಾರರು..! ಈ ಬೇಟೆಗಾರರ ಹಿಡಿಯುವ ರಣಬೇಟೆಗಾರರು ಬರುವುದು ಯಾವಾಗ..?

ನ್ಯೂಸ್ ನಾಟೌಟ್: ಕಳೆದ ಕೆಲವು ದಿನಗಳಿಂದ ಕೊಡಗು ವ್ಯಾಪ್ತಿಯ ಪೆರಾಜೆಯ ಭಾಗದಲ್ಲಿ ಕಾಡು ಪ್ರಾಣಿಗಳ ಬೇಟೆಯಾಡುತ್ತಿರುವುದು ಬಾರಿ ಸದ್ದಾಗುತ್ತಿದೆ. ಅರಣ್ಯ ಇಲಾಖೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಹೊರತಾಗಿಯೂ ಎಗ್ಗಿಲ್ಲದೆ ಕಾಡು ಪ್ರಾಣಿಗಳ ಹತ್ಯೆ ನಡೆಯುತ್ತಿರುವುದು ವಿಪರ್ಯಾಸ.

ಇತ್ತೀಚೆಗೆ ಪೆರಾಜೆಯಲ್ಲಿ ಅರಣ್ಯ ಇಲಾಖೆ ಕಾಡು ಪ್ರಾಣಿ ಬೇಟೆಯಾಡಿದ ಒಬ್ಬನ ಹೆಡೆಮುರಿ ಕಟ್ಟಿತ್ತು. ಹೀಗಿದ್ದರೂ ಕೂಡ ಜಾಮೀನಿನ ಮೇಲೆ ಹೊರ ಬರುವ ಧೈರ್ಯದಿಂದ ಇನ್ನೂ ಕೆಲವರು ಬೇಟೆಯಾಡುವುದನ್ನು ಮುಂದುವರಿಸಿದ್ದಾರೆ. ಇದೀಗ ಕಾಡು ಪ್ರಾಣಿ ಎಂದು ತಪ್ಪು ತಿಳಿದುಕೊಂಡು ಸಾಕು ನಾಯಿಗೆ ಗುಂಡಿಟ್ಟಿದ್ದಾರೆ. ಸಾಕು ನಾಯಿ ಸ್ಥಳದಲ್ಲೇ ಸಾವನ್ನಪ್ಪಿದೆ. ಶನಿವಾರ ರಾತ್ರಿ ಕಾಪುಮಲೆ ಎಂಬಲ್ಲಿ ದಯಾಕರ ಎಂಬುವವರ ಮನೆಯ ಬಳಿ ಬೇಟೆಗಾರರು ಕಾಡು ಪ್ರಾಣಿಗಳನ್ನು ಹೊಡೆಯುವುದಕ್ಕೆ ಆಗಮಿಸಿದ್ದಾರೆ. ಈ ವೇಳೆ ಕತ್ತಲಲ್ಲಿ ಬೇಟೆಗಾರರ ಲೈಟ್ ಗೆ ಸಾಕು ನಾಯಿ ಕಣ್ಣು ಕೊಟ್ಟಿದೆ. ತಡಮಾಡದೆ ಢಂ ಎನಿಸಿದ್ದಾರೆ. ಈ ಸಲ ಭರ್ಜರಿ ಬೇಟೆ ಸಿಕ್ಕಿತು ಎಂದು ಸ್ಥಳಕ್ಕೆ ಬಂದು ನೋಡಿದಾಗ ಸಾಕು ನಾಯಿ ಬಿದ್ದಿದ್ದನ್ನು ನೋಡಿ ಸ್ಥಳದಿಂದ ಬೇಟೆಗಾರರು ಎಸ್ಕೇಪ್ ಆಗಿದ್ದಾರೆ. ಬೇಟೆಗಾರರು ರಾತ್ರಿಯಾದರೆ ಕಾಡಿನೊಳಕ್ಕೆ ಬಂದೂಕು ಹಿಡಿದುಕೊಂಡು ನುಗ್ಗುತ್ತಾರೆ. ಆದರೆ ಇವರನ್ನು ಹಿಡಿಯುವ ರಣಬೇಟೆಗಾರರು ಬರುವುದು ಯಾವಾಗ..? ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

Related posts

ಸುಳ್ಯ : ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ,ಮನೆಯಲ್ಲಿ ಯಾರೂ ಇಲ್ಲದ ವೇಳೆ ದುರಂತ

ಮಡಿಕೇರಿ: 150 ಗಂಟೆಗಳಿಗೂ ಅಧಿಕ ಕಾಲ ಯುದ್ಧ ವಿಮಾನ ಹಾರಾಟ ನಡೆಸಿ ಸಾಧನೆ , ಕೊಡಗಿನ ಸಚಿನ್ ಬೇಂಬೊರೆ ವಾಯು ಸೇನೆಯ ಫ್ಲೈಯಿಂಗ್ ಆಫೀಸರ್ ಆಗಿ ನೇಮಕ

ಕಡಬ:ಮರಿಯಾನೆ ಸೇರಿದಂತೆ ಕಾಡಾನೆಗಳ ಹಿಂಡು ಪತ್ತೆ,ಆತಂಕದಲ್ಲಿ ಸ್ಥಳೀಯರು