ಕರಾವಳಿ

ಶಿರಾಡಿ ಗ್ರಾಮ ಪಂಚಾಯತ್ ಪಿಡಿಒ ವೆಂಕಟೇಶ್ ದಿಢೀರ್ ವರ್ಗಾವಣೆ

ನ್ಯೂಸ್ ನಾಟೌಟ್:  ಶಿರಾಡಿ ಗ್ರಾ.ಪಂ.ಪಿಡಿಒ (ಪಂಚಾಯತ್ ಅಭಿವೃದ್ಧಿ ಅಧಿಕಾರಿ) ವೆಂಕಟೇಶ್ ಪಿ ಅವರನ್ನು ಬೆಳ್ತಂಗಡಿಯ ತೆಕ್ಕಾರು ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಳಿಸಲಾಗಿದೆ.  ಕರ್ನಾಟಕ ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರು  ಅ.18ರಂದು ಆದೇಶಿಸಿದ್ದಾರೆ ಎಂದು ವರದಿಯಾಗಿದೆ.

ಈ ಆದೇಶದಂತೆ ಪಿಡಿಒ  ಅವರನ್ನು ಶಿರಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಯ ಕರ್ತವ್ಯದಿಂದ ಅ.29ರಂದು ಬಿಡುಗಡೆಗೊಳಿಸಿ  ಕಡಬ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯವರು ಆದೇಶಿಸಿದ್ದಾರೆ. ಇವರಿಂದ ತೆರವಾದ ಸ್ಥಾನಕ್ಕೆ ಕೌಕ್ರಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್ ಜಿ.ಎನ್.ರವರನ್ನು ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ನೇಮಕಗೊಳಿಸಿ ಕಡಬ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಆದೇಶಿಸಿದ್ದಾರೆ.

Related posts

ದಕ್ಷಿಣ ಕನ್ನಡ: ರಾತ್ರಿ ಐರಾವತ ಹಾಗೂ ರಾಜಹಂಸ ಬಸ್‍ಗಳ ನಡುವೆ ಡಿಕ್ಕಿ..! ಹಳ್ಳಕ್ಕೆ ಬಿದ್ದ ಈಚರ್ ಲಾರಿ..!

ಬಿಜೆಪಿಯವರು ಕೀಳು ರಾಜಕೀಯ ಮಾಡುವುದನ್ನುಇನ್ನಾದರೂ ನಿಲ್ಲಿಸಲಿ,ಪ್ರವೀಣ್ ಪತ್ನಿಗೆ ಯಾಕೆ ಶಾಶ್ವತ ಉದ್ಯೋಗ ಮಾಡಿಸಿಕೊಡಲು ಪ್ರಯತ್ನಿಸಿಲ್ಲ?-ಪದ್ಮರಾಜ್ ಆರ್.

ಪ್ರವೀಣ್ ಹತ್ಯೆಗೆ ನಡೆದಿತ್ತು ಎರಡು ಸಲ ವಿಫಲ ಪ್ರಯತ್ನ..!