Uncategorized

ರಾಜ್ಯದ ಪಿಡಿಒಗಳ ಹೆಗಲಿಗೇರಿದೆ ಹೊಸ ಜವಾಬ್ದಾರಿ

ಬೆಂಗಳೂರು: ರಾಜ್ಯದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳಿಗೆ ಹೊಸ ಜವಾಬ್ದಾರಿಯೊಂದು ಹೆಗಲೇರಿದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿವಾಹ ನೋಂದಣಿ ಅಧಿಕಾರಿಯಾಗಿ ಪಿಡಿಒ ಕಾರ್ಯ ನಿರ್ವಹಿಸಲಿದ್ದಾರೆ.

ಕರ್ನಾಟಕ ವಿವಾಹಗಳ (ನೋಂದಣಿ ಮತ್ತು ವಿವಿಧ ನಿಬಂಧನೆಗಳು) ಕಾಯಿದೆ, 1976 (ಕರ್ನಾಟಕ ಅಧಿನಿಯಮ 2, 1984) ರ ಉಪ-ವಿಭಾಗ (1) ರ ಅಡಿಯಲ್ಲಿ ಪ್ರದಾನ ಮಾಡಲಾದ ಅಧಿಕಾರಗಳ ಅನ್ವಯ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿವಾಹ ನೋಂದಣಿ ಪ್ರಾಧಿಕಾರವಾಗಿ ನೇಮಿಸಿ ಅಧಿಸೂಚನೆ ಹೊರಡಿಸಲಾಗಿದೆ.

Related posts

ಪೆರಾಜೆ: ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ತೆರವು ಕಾರ್ಯಾಚರಣೆ ಆರಂಭ

ಸೆಪ್ಟೆಂಬರ್ ನಲ್ಲಿ ಒಟ್ಟು 13 ದಿನ ಬ್ಯಾಂಕಿಗೆ ರಜೆ

ಪತ್ನಿ ಗರ್ಭಿಣಿಯಾಗುತ್ತಲೇ ಕೈಕೊಟ್ಟು ಓಡಿದ ಪಿಡಿಓ