ಕೊಡಗು

ಅಬ್ಬರಿಸಿದ ಪಯಸ್ವಿನಿ ನದಿ, ಕೊಯನಾಡಿನಲ್ಲಿ ಮತ್ತೆ ಅವಘಡ

ನ್ಯೂಸ್ ನಾಟೌಟ್: ತಡರಾತ್ರಿ ಸುರಿದ ಮಳೆಗೆ ಪಯಸ್ವಿನಿ ನದಿ ನೀರು ಅಬ್ಬರಿಸಿ ಉಕ್ಕಿ ಹರಿದಿದೆ. ಇದರಿಂದಾಗಿ ಪಯಸ್ವಿನಿ ನದಿ ತೀರದಲ್ಲಿದ್ದ ಜನರು ರಾತ್ರೋ ರಾತ್ರಿ ಮನೆಗಳನ್ನು ಖಾಲಿ ಮಾಡಿದ ಘಟನೆ ಭಾನುವಾರ ತಡರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮತ್ತೆ ಮನೆಗಳಿಗೆ ನುಗ್ಗಿದ ನೀರು

ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕೊಯನಾಡು ಶಾಲೆ ಬಳಿ 5 ಮನೆಗಳು ಜಲಾವೃತಗೊಂಡಿದೆ. ಮತ್ತೊಮ್ಮೆ ಕಿಂಡಿ ಅಣೆಕಟ್ಟಿಗೆ ಅಡ್ಡಲಾಗಿ ಭಾರಿ ಗಾತ್ರದ ಮರಗಳು ಅಡ್ಡಲಾಗಿ ನಿಂತಿವೆ. ಇದರಿಂದ ಸಮೀಪದ ಮನೆಗಳಿಗೆ ಸುಲಭವಾಗಿ ನೀರು ನುಗ್ಗಿದೆ. ಮನೆಗಳಲ್ಲಿ ವಾಸವಿದ್ದ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಇನ್ನು  ಕೊಡಗು ಸಂಪಾಜೆ ಗ್ರಾಮದ ಚೆಡಾವು ನಿಂದ ಕೊಯನಾಡು  ಎಸ್ಟೇಟ್ ಗೆ ತೆರಳುವ ಸಂಪರ್ಕ ಸೇತುವೆಯೇ ಭೀಕರ ಮಳೆ ಪ್ರವಾಹಕ್ಕೆ ಇಲ್ಲದಂತಾಗಿದೆ .ಆ ಭಾಗದಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ.

Related posts

ಎರಡನೇ ಮದುವೆ ಆಗ್ತಾರಾ ನಟಿ ಪ್ರೇಮಾ ?! ಡಿವೋರ್ಸ್..‌ ಡಿಪ್ರೆಷನ್‌.. ನಂತರ ಕ್ಯಾನ್ಸರ್? ಏನಿದು ಗುಸು ಗುಸು ಮಾತು?

ಮಡಿಕೇರಿ: ಆಟೋ ಚಾಲಕನ ಮೇಲೆ ಏಕಾಏಕಿ ಎರಗಿದ ಕಾಡಾನೆ, ಗಾಯಾಳು ಗಂಭೀರ

ಮಡಿಕೇರಿ:ಭೀಕರ ರಸ್ತೆ ಅಪಘಾತ-ಬೈಕ್ ಸವಾರ ಸ್ಥಳದಲ್ಲೇ ಮೃತ್ಯು