ವೈರಲ್ ನ್ಯೂಸ್ಸುಳ್ಯ

ಕಲ್ಚರ್ಪೆ ಕಸದ ರಾಶಿ ಮಳೆ ನೀರಿನ ಜೊತೆ ಪಯಸ್ವಿನಿ ನದಿ ಸೇರುತ್ತಿದೆಯೇ..? ಸುಳ್ಯ ನಗರ ಪಂಚಾಯತ್ ಮರ್ಯಾದೆ ಹರಾಜಾಗೋದನ್ನ ತಡೆಯಲು ನಾವೇ ನಿಂತು ಕೆಲಸ ಮಾಡಬೇಕಿದೆ ಎಂದು ವಿನಯ್ ಕುಮಾರ್ ಕಂದಡ್ಕ ಬೇಸರ ವ್ಯಕ್ತಪಡಿಸಿದ್ದೇಕೆ..?

ನ್ಯೂಸ್ ನಾಟೌಟ್: ಪೆರಾಜೆ ಬಳಿ ಇರುವ ಕಲ್ಚರ್ಪೆ ಕಸದ ರಾಶಿ ಮಳೆಗಾಲದಲ್ಲಿ ಪ್ರತಿ ವರ್ಷವೂ ಸದ್ದಾಗುತ್ತದೆ. ಸುತ್ತಮುತ್ತಲಿನ ಜನ ಗಬ್ಬುವಾಸನೆ ಜೊತೆ ಜೀವನ ನಡೆಸಬೇಕಿದೆ. ಇಲ್ಲಿ ಮೂವತ್ತಕ್ಕೂ ಹೆಚ್ಚಿನ ಮನೆಗಳಿದ್ದು ಅವರೆಲ್ಲೂ ಅಕ್ಷರಶಃ ನರಕ ಅನುಭವಿಸುವಂತಾಗಿದೆ. ಈ ನಡುವೆ ಇದೀಗ ಅಲ್ಲಿನ ಕಸದ ರಾಶಿ ಮಳೆಯ ನೀರಿನ ಜೊತೆ ಪಯಸ್ವಿನಿ ನದಿ ನೀರು ಸೇರುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಸ್ವತಃ ನಗರ ಪಂಚಾಯತ್ ವತಿಯಿಂದ ಕಸ ನದಿ ನೀರು ಸೇರುವುದನ್ನು ತಪ್ಪಿಸಲು ಹಿಟಾಚಿ ಬಳಸಿ ಕಾರ್ಯಾಚರಣೆ ನಡೆಸಿದೆ.

ಈ ಬೆನ್ನಲ್ಲೇ ಸುಳ್ಯ ನಗರ ಪಂಚಾಯತ್ ವಾಟ್ಸಾಪ್ ಗ್ರೂಪ್ ನಲ್ಲಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಎರಡು ಫೋಟೋಗಳನ್ನು ಅಪ್ ಲೋಡ್ ಮಾಡಿರುವ ಅವರು ‘ಕಲ್ಚರ್ಪೆಯಲ್ಲಿ ಮಳೆ ನೀರಿಗೆ ಸಿಲುಕಿ ಹರಿದು ಹೋಗಿ ಪಯಸ್ವಿನಿ ನದಿ ಸೇರಬಹುದಾದ ಕಸವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಇಂತಹ ಕೆಲಸ ಮಾಡಿಸಲು ಗಮನಿಸಲು ಆರೋಗ್ಯ ಶಾಖೆಗೆ ಸಮಯವಿಲ್ಲ. ಅಧಿಕಾರಿಗಳಿಗೆ ಊರವರು ಮನವಿ ಕೊಟ್ಟು ಪ್ರಯೋಜನವಿಲ್ಲ. ಗುತ್ತಿಗೆದಾರರಿಗೆ ಹಿಟಾಚಿ ಸಿಗೋದಿಲ್ಲ. ಊರಿನ ಆರೋಗ್ಯ ಸುರಕ್ಷತೆಗೆ ನಗರ ಪಂಚಾಯತ್ ನ ಮರ್ಯಾದೆ ಹರಾಜಾಗೋದನ್ನು ತಡೆಯಲು ನಾವೇ ನಿಂತು ಕೆಲಸ ಮಾಡಬೇಕಿದೆ ಎಂದು ಬರೆದುಕೊಂಡಿದ್ದಾರೆ.

ಇಂತಹ ಬೇಸರವನ್ನು ಹೊರಹಾಕಿರುವ ವಿನಯ್ ಕುಮಾರ್ ವ್ಯವಸ್ಥೆಯ ಮೇಲಿನ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿದ್ದಾರೆ. ಈ ವಿಚಾರ ಚರ್ಚೆಗೆ ಕಾರಣವಾಗಿದೆ.

Click 👇

https://newsnotout.com/2024/06/mangaluru-daiva-temple-kannada-news-n
https://newsnotout.com/2024/06/challenging-star-darshan-arrested-in-process
https://newsnotout.com/2024/06/bike-father-sister-and-son-conflict-kannada-news
https://newsnotout.com/2024/06/kannada-news-hd-devegowda-and-narendra-modi-call

Related posts

ಮಂಗಳೂರು: ಗುಪ್ತಾಂಗದಲ್ಲಿಟ್ಟು 349 ಗ್ರಾಂ. ಚಿನ್ನ ಕಳ್ಳಸಾಗಣೆ ಮಾಡಿದ ಮಹಿಳೆ..! ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಹಾಕಿಕೊಂಡಳು ಹೀಗೊಬ್ಬಳು ಚಾಲಾಕಿ ಕಳ್ಳಿ..!

‘ಪ್ರಜ್ವಲ್ ಪೆನ್​ಡ್ರೈವ್’ ಪ್ರಕರಣ ಸುದ್ದಿಯಾದ ಬೆನ್ನಲ್ಲೇ ‘ಪೆನ್​ಡ್ರೈವ್’ ಸಿನಿಮಾ..! ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಬಿಗ್ ಬಾಸ್ ಖ್ಯಾತಿಯ ತನಿಷಾ..!

ಅಂದು ಕಣ್ಣು ಕಾಣಿಸಲ್ಲವೆಂದು ಮಗುವನ್ನು ಕಸದ ತೊಟ್ಟಿಗೆ ಬಿಸಾಕಿದ್ದ ಪೋಷಕರು, ಇಂದು ಅದೇ ಹುಡುಗಿ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಪಾಸ್ , ಸಿಎಂ ಕಚೇರಿಯಲ್ಲಿ ಉದ್ಯೋಗ