ಕರಾವಳಿಸುಳ್ಯ

ಸುಳ್ಯ: ತಾಲೂಕು ಮಟ್ಟದ ದಸರಾ ಥ್ರೋಬಾಲ್ ಕ್ರೀಡಾಕೂಟ, ಪ್ರಚಂಡ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ನಾಗಶ್ರೀ ಫ್ರೆಂಡ್ಸ್

ನ್ಯೂಸ್ ನಾಟೌಟ್: ಸುಳ್ಯ ತಾಲೂಕು ಮಟ್ಟದ ದಸರಾ ಥ್ರೋಬಾಲ್ ಕ್ರೀಡಾಕೂಟದಲ್ಲಿ ತಿಲಕ ನವೀನ್ ನಾಯಕತ್ವದ ನಾಗಶ್ರೀ ಫ್ರೆಂಡ್ಸ್ ಸುಳ್ಯ ತಂಡವು ಪ್ರಚಂಡ ಪ್ರದರ್ಶನ ನೀಡಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ಸೆ.24ರಂದು ನಡೆದ ಫೈನಲ್ ಪಂದ್ಯದಲ್ಲಿ ಸುಬ್ರಹ್ಮಣ್ಯ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಈ ಸಾಧನೆ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಪಂಚಾಯತ್ ಸುಳ್ಯ , ಗ್ರಾಮ ಪಂಚಾಯತ್ ಪಂಜ , ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ , ಪಂಚಶ್ರೀ ಪಂಜ ಸ್ಪೋಟ್ಸ್ ಕ್ಲಬ್ (ರಿ) ಆಶ್ರಯದಲ್ಲಿ ಸ.ಪ.ಪೂ ಕಾಲೇಜಿನ ಕೋಟಿ ಚೆನ್ನಯ್ಯ ಕ್ರೀಡಾಂಗಣದಲ್ಲಿ ಸೆ.24 ರಂದು 2023 – 24 ನೇ ಸಾಲಿನ ಸುಳ್ಯ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಈ ಕ್ರೀಡಾಕೂಟ ದಲ್ಲಿ ಸುಮಾರು 9 ತಂಡಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ನಾಗಶ್ರೀ ಫ್ರೆಂಡ್ಸ್ ಸುಳ್ಯ ತಂಡವು ಆರಂಭದಿಂದ ಕೊನೆಯ ತನಕ ಅತ್ಯುತ್ತಮ ಲಯವನ್ನು ಪ್ರದರ್ಶಿಸುವ ಮೂಲಕ ಗೆಲುವು ಸಾಧಿಸಿತು. ಸೆಮಿಫೈನಲ್ ನಲ್ಲಿ ಮುತ್ತುಶ್ರೀ ಕಣಿಯೂರು ತಂಡದ ವಿರುದ್ಧ ಗೆಲುವು ದಾಖಲಿಸಿದ್ದ ನಾಗಶ್ರೀ ಫ್ರೆಂಡ್ಸ್ ಸುಳ್ಯ ತಂಡವು ಫೈನಲ್ ಗೆ ಪ್ರವೇಶ ಪಡೆದುಕೊಂಡಿದ್ದು ಕೂಟದ ಪ್ರಮುಖ ಹೈಲೈಟ್ ಗಳಲ್ಲಿ ಒಂದಾಗಿತ್ತು.

ವಿಜೇತ ತಂಡ ಪರ ಭವಿತಾ ಕಳಂಜ , ಚಂಪ, ಶೃತಿ ಪೈಲಾರು, ಧನ್ಯಶ್ರೀ , ಧನುಶ್ರೀ, ಪೂಜಾ ಏನೆಕಲ್ಲು, ಕಮಲ ಬಾಳಿಲ, ದಿವ್ಯ ಏನೆಕಲ್ಲು ಕೂಡ ಗಮನಾರ್ಹ ಪ್ರದರ್ಶನ ನೀಡಿದ್ದರು. ಚಾಂಪಿಯನ್ ತಂಡ ಅ.1 ರಂದು ಮಂಗಳೂರಿನ ಮಂಗಳ ಸ್ಡೇಡಿಯಂ ನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲಿದೆ.

Related posts

ದಕ್ಷಿಣ ಕನ್ನಡ: ಸೌಜನ್ಯ ನೋಟಾ ಪರವಾಗಿ ಬೂತ್..! ವೈರಲ್ ಆಗುತ್ತಿದೆ ಫೋಟೋ

ಸಮುದ್ರದಲ್ಲಿ ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ, 3 ಸಿಬ್ಬಂದಿ ನಿಗೂಢ ನಾಪತ್ತೆ..! ನಾಲ್ಕು ಹಡಗುಗಳು ಮತ್ತು ಎರಡು ವಿಮಾನಗಳ ಮೂಲಕ ಹುಡುಕಾಟ..!

ಕಲ್ಲುಗುಂಡಿ : ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಮುಹೂರ್ತ ಕಾರ್ಯಕ್ರಮ