ಕರಾವಳಿ

ಸ್ವಚ್ಚತೆ ಕೊರತೆ ಹಿನ್ನಲೆ:ಬೀಚ್ ನಲ್ಲಿದ್ದ ಫಾಸ್ಟ್ ಫುಡ್ ಅಂಗಡಿಗಳ ಎತ್ತಂಗಡಿ

ನ್ಯೂಸ್ ನಾಟೌಟ್ : ಸ್ವಚ್ಚತೆ ಕೊರತೆ ಹಿನ್ನಲೆ ಮಂಗಳೂರಿನ ಪಣಂಬೂರು ಬೀಚ್ ನಲ್ಲಿದ್ದ  ಅನಧಿಕೃತ ೬ ಫಾಸ್ಟ್ ಫುಡ್ ಸೇರಿದಂತೆ ೯ ಅಂಗಡಿಗಳಿಗೆ ದ.ಕ. ಜಿಲ್ಲಾಧಿಕಾರಿ ದಿಢೀರ್ ದಾಳಿ ನಡೆಸಿದ್ದಾರೆ.ಪಣಂಬೂರು ಬೀಚ್ ನಲ್ಲಿ ಏರ್ಪಡಿಸಲಾಗಿದ್ದ ಸ್ವಚ್ಚ ಸುಂದರ ಕಿನಾರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಬೀಚ್ ಸುತ್ತ ಮುತ್ತ ವೀಕ್ಷಿಸಿ ಕಿನಾರೆ ಸ್ವಚ್ಚವಾಗಿಟ್ಟುಕೊಳ್ಳದಿರುವ ಬಗ್ಗೆ ಗರಂ ಆದರು.

ಅಲ್ಲಲ್ಲಿ ಬಿದ್ದಿರುವ ಕಸದ ರಾಶಿಯನ್ನು ಕಂಡು ಆಕ್ರೋಶ ಭರಿತರಾದ ಡಿ.ಸಿ. ರವಿಕುಮಾರ್ ಅವರು,ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಮಾತ್ರವಲ್ಲ ಕೆಲವು ಅನಧಿಕೃತ ಫಾಸ್ಟ್ ಫುಡ್ ಅಂಗಡಿಗಳನ್ನು ತಕ್ಷಣ ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ. ಮಳಿಗೆಗಳನ್ನು ಪರಿಶೀಲಿಸಿ ಮುಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ತಿಳಿದು ಬಂದಿದೆ.

Related posts

ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಪ್ರಕರಣ: ಮೂವರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

ಪಯಸ್ವಿನಿ ಅಬ್ಬರ: ಸಂಪಾಜೆ, ಕೊಯನಾಡು, ಕಲ್ಲುಗುಂಡಿ ತತ್ತರ

ಫಸ್ಟ್​​ ನೈಟ್​​​ನಲ್ಲೂ ಕಂಪ್ಯೂಟರ್​​ ಮುಂದೆ ಕುಳಿತದ್ದೇಕೆ ಮದುಮಗ? ಏನಿದು ವೈರಲ್ ಪೋಸ್ಟ್? ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿಕೆ ವಿವಾದವಾಗುತ್ತಿರುವುದೇಕೆ?