ಕ್ರೈಂದೇಶ-ಪ್ರಪಂಚದೇಶ-ವಿದೇಶ

ಆನ್ ಲೈನ್ ಲವ್ : ಪಾಕ್‌ ವ್ಯಕ್ತಿಯನ್ನು ಮದುವೆಯಾದ ಮುಂಬೈ ಮಹಿಳೆ..! ತಾಯಿಯಿಂದ ಮಕ್ಕಳನ್ನು ಬಚ್ಚಿಟ್ಟದ್ದೇಕೆ ಆತ..? ಸಂಕಷ್ಟಕ್ಕೆ ಸಿಲುಕಿದ ಆಕೆ ಹೇಳಿದ್ದೇನು..?

ನ್ಯೂಸ್ ನಾಟೌಟ್: ಪಾಕಿಸ್ತಾನದ ಸೀಮಾ ಹೈದರ್‌ ಹಾಗೂ ಭಾರತದ ಸಚಿನ್ ಮೀನಾ ಆನ್‌ಲೈನ್‌ ಮೂಲಕವೇ ಪ್ರೀತಿಸಿ, ಈಗ ಭಾರತಕ್ಕೆ ಬಂದಿರುವ ಸೀಮಾ ಹೈದರ್‌, ಸಚಿನ್‌ ಜತೆ ಸುಖವಾಗಿದ್ದಾರೆ. ಆದರೆ, ಮುಂಬೈ ಮೂಲದ ಮಹಿಳೆಯೊಬ್ಬರು ಪಾಕಿಸ್ತಾನದ ವ್ಯಕ್ತಿಯನ್ನು ನಂಬಿ, ಆತನನ್ನು ಮದುವೆಯಾಗಿದ್ದು, ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು, ಮುಂಬೈ ಮೂಲದ ಫರ್ಜಾನಾ ಬೇಗಂ ಪಾಕಿಸ್ತಾನದ ವ್ಯಕ್ತಿಯನ್ನು ಮದುವೆಯಾಗಿ, ಅಲ್ಲಿಯೇ ನೆಲೆಸಿದ್ದಾರೆ. ಆದರೆ, ಅವರ ಮಕ್ಕಳನ್ನು ಈಗ ಗೌಪ್ಯ ಸ್ಥಳದಲ್ಲಿ ಇರಿಸಿದ್ದು, ನನ್ನ ಮಕ್ಕಳು ಅಪಾಯದಲ್ಲಿದ್ದಾರೆ.

ಅವರನ್ನು ನನಗೆ ನೀಡದ ಹೊರತು ಪಾಕಿಸ್ತಾನ ತೊರೆಯುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಫರ್ಜಾನಾ ಬೇಗಂ ೨015ರಲ್ಲಿ ಅಬುಧಾಬಿಯಲ್ಲಿ ಪಾಕಿಸ್ತಾನದ ಮಿರ್ಜಾ ಮುಬಿನ್‌ ಇಲಾಹಿ ಎಂಬಾತನನ್ನು ಮದುವೆಯಾಗಿದ್ದರು. ಮೊದಲು ಇಬ್ಬರ ಮಧ್ಯೆ ಎಲ್ಲವೂ ಚೆನ್ನಾಗಿತ್ತು. 2018ರಲ್ಲಿ ಪಾಕಿಸ್ತಾನಕ್ಕೆ ತೆರಳಿದ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ, ಕೆಲ ತಿಂಗಳಿಂದ ಫರ್ಜಾನಾ ಬೇಗಂ ಅವರ ಇಬ್ಬರು ಮಕ್ಕಳನ್ನು ಗೌಪ್ಯ ಸ್ಥಳದಲ್ಲಿ ಇರಿಸಲಾಗಿದೆ. “ಫರ್ಜಾನಾ ಬೇಗಂ ನನಗೆ ಕಿರುಕುಳ ನೀಡಿದ್ದಾಳೆ” ಎಂಬುದಾಗಿ ಮಿರ್ಜಾ ಮುಬಿನ್‌ ಆರೋಪಿಸಿದ್ದಾನೆ.

ಇದರಿಂದಾಗಿ ಇಬ್ಬರ ಮಧ್ಯೆ ವಿರಸ ಉಂಟಾಗಿದೆ ಎಂಬುದು ಸಾಬೀತಾಗಿದೆ. ಇದರ ಮಧ್ಯೆಯೇ, ಮಕ್ಕಳು ಕಾಣೆಯಾಗಿರುವ ಕುರಿತು ಫರ್ಜಾನಾ ಬೇಗಂ ಆತಂಕ ವ್ಯಕ್ತಪಡಿಸಿದ್ದಾರೆ. “ನನಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬನಿಗೆ 7 ವರ್ಷ, ಮತ್ತೊಬ್ಬನಿಗೆ 6 ವರ್ಷ ವಯಸ್ಸು. ಆದರೆ, ಇಬ್ಬರನ್ನೂ ಕಸ್ಟಡಿಯಲ್ಲಿ ಇರಿಸಲಾಗಿದ್ದು, ನನ್ನಿಂದ ದೂರ ಮಾಡಿದ್ದಾರೆ. ನನ್ನ ಪತಿಯೇ ಇದರ ಪಿತೂರಿದಾರನಾಗಿದ್ದಾನೆ. ನಾನು ಆತನಿಗೆ ವಿಚ್ಛೇದನ ನೀಡಿದ್ದೇನೆ ಎಂಬುದಾಗಿ ಹೇಳಿದ್ದಾನೆ. ಹಾಗೊಂದು ವೇಳೆ ನಾನು ವಿಚ್ಛೇದನ ನೀಡಿದ್ದರೆ, ಪ್ರಮಾಣಪತ್ರ ಇರಬೇಕಲ್ಲವೇ? ನನ್ನ ಮಕ್ಕಳು ನನಗೆ ಬೇಕು. ನನ್ನ ಮಕ್ಕಳನ್ನು ನೀಡಿದರೆ ಮಾತ್ರ ನಾನು ಮತ್ತೆ ಭಾರತಕ್ಕೆ ಹೋಗುತ್ತೇನೆ” ಎಂಬುದಾಗಿ ಫರ್ಜಾನಾ ಬೇಗಂ ಹೇಳಿದ್ದಾರೆ ಎನ್ನಲಾಗಿದೆ. ಆಸ್ತಿಯ ವಿಷಯಕ್ಕಾಗಿ ನನ್ನ ಪತಿಯೇ ಕುತಂತ್ರ ಮಾಡಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ.

Related posts

ಭಾರತದ ಮತ್ತೊಬ್ಬ ಮೋಸ್ಟ್‌ ವಾಂಟೆಡ್‌ ಉಗ್ರ ಪಾಕಿಸ್ತಾನದಲ್ಲಿ ನಿಗೂಢ ಅಂತ್ಯ! ಗುಂಡಿನ ದಾಳಿ ಮಾಡಿದ ಅಪರಿಚಿತರು ಯಾರು..?

ಬೈಕ್ ಅಡ್ಡ ಹಾಕಿ ಕಾರಿನ ಬಾನೆಟ್ ಮೇಲೆ ಹತ್ತಿ ಸವಾರನ ಅಟ್ಟಹಾಸ..! ವಿಡಿಯೋ ವೈರಲ್

29ನೇ ಮಹಡಿಯಿಂದ ಹಾರಿದ 12 ರ ಬಾಲಕಿ..! 6 ನೇ ತರಗತಿಯ ಬಾಲಕಿಯ ನಿಗೂಢ ಸಾವಿಗೆ ಕಾರಣವೇನು..?