ದೇಶ-ಪ್ರಪಂಚ

ಮತ್ತೊಮ್ಮೆಗಡ..ಗಡ ನಡುಗಿದ ಟರ್ಕಿ, ಗಾಯದ ಮೇಲೆ ಬರೆ ಎಳೆದಂತಾಯಿತು ಜನರ ಸ್ಥಿತಿ..!

ನ್ಯೂಸ್ ನಾಟೌಟ್: ಕಳೆದ ಕೆಲವು ದಿನಗಳ ಹಿಂದೆ ಟರ್ಕಿಯಲ್ಲಿ ಭೀಕರ ಭೂಕಂಪ ಸಂಭವಿಸಿತ್ತು. ಭಾರಿ ಸಂಖ್ಯೆಯಲ್ಲಿ ಜನರು ಜೀವ ತೆತ್ತಿದ್ದರು. ಇದೀಗ ಟರ್ಕಿ ಸ್ವಲ್ಪ ಚೇತರಿಸಿಕೊಳ್ಳುತ್ತಿರುವಾಗಲೇ ಶನಿವಾರ ಬೆಳಗ್ಗೆ ಮತ್ತೊಮ್ಮೆ ಅಲ್ಲಿನ ಭೂಮಿ ಕಂಪಿಸಿದೆ.

ರಕ್ಷಣಾ ಪಡೆಗಳು ತಮ್ಮ ಕಾರ್ಯಾಚರಣೆಯನ್ನು ಮಾಡುತ್ತಾ ಇದ್ದಾರೆ. ಅವಶೇಷಗಳಡಿ ಸಿಲುಕಿರುವ ಅದೆಷ್ಟೋ ಜನರನ್ನು ರಕ್ಷಿಸಿದ್ದಾರೆ. ಬದುಕುಳಿದವರು ಸಹಜ ಸ್ಥಿತಿಗೆ ಬರಲು ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಟರ್ಕಿಯಲ್ಲಿ ಮತ್ತೆ ಭೂಕಂಪನ ಅನುಭವವಾಗಿದ್ದು ಜನರು ಭಯದಿಂದಲೇ ಬದುಕುವ ಹಾಗಾಗಿದೆ. ಶನಿವಾರ ಮಧ್ಯ ಟರ್ಕಿ ಯಲ್ಲಿ ಸಂಭವಿಸಿದ ಭೂಕಂಪದ ಪ್ರಮಾಣ 5.2 ತೀವ್ರತೆಯ ಹೊಂದಿತ್ತು ಎನ್ನಲಾಗಿದೆ. ಯುರೋಪಿಯನ್ ಮೆಡಿಟರೇನಿಯನ್ ಸಿಸ್ಮೋಲಾಜಿಕಲ್ ಸೆಂಟರ್ ಪ್ರಕಾರ ಭೂಕಂಪವು 10ಕಿ.ಮೀ ಆಳದಲ್ಲಿ ಸಂಭವಿಸಿದೆ ಎನ್ನಲಾಗಿದೆ. ಭೂಕಂಪದ ನಂತರ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆ ವರದಿ ಆಗಿಲ್ಲ.

Related posts

ಮದ್ಯದ ಬಾಟಲಿ ಹಿಡಿದು ಫ್ರೀ ಬಸ್ ಏರಿದ ಮಹಿಳೆಯರು! ಬೈದು ಕೆಳಕ್ಕಿಳಿಸಿದ ಕಂಡೆಕ್ಟರ್, ಪೊಲೀಸ್ ಠಾಣೆಯೆದುರೇ ಹೈಡ್ರಾಮಾ..!

ಅಮೆರಿಕದಲ್ಲಿ ಭವ್ಯವಾಗಿ ತಲೆ ಎತ್ತಿದೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾ ಮಠ, ನ್ಯೂಜೆರ್ಸಿಯಲ್ಲಿರುವ ಮಠ ಹೇಗಿದೆ ನೋಡಿ?

“ಲಿವ್ ಇನ್ ರಿಲೇಶನ್” ಗೆ ಇನ್ನು ಮುಂದೆ ನೋಂದಣಿ ಕಡ್ಡಾಯ..!ಮುಸ್ಲಿಮರು ಸೇರಿದಂತೆ ಯಾವ ಧರ್ಮದವರಿಗೂ 2ನೇ ಮದುವೆ ಅವಕಾಶವಿಲ್ಲ