ಸುಳ್ಯ

ಸುಳ್ಯ: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಓಣಂ ಆಚರಣೆ,ಗಮನ ಸೆಳೆದ ಪುಟಾಣಿ ಮಹಾಬಲಿ ಹಾಗೂ ವಾಮನ ವೇಷ

ನ್ಯೂಸ್ ನಾಟೌಟ್: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಓಣಂ ಹಬ್ಬವನ್ನು ಪುಟಾಣಿಗಳು, ಶಿಕ್ಷಕರು ಹಾಗೂ ಪೋಷಕರು ಸೇರಿ ಸಂಭ್ರಮದಿಂದ ಆಚರಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಹಾಗೂ ಪೋಷಕಿ ಸವಿತಾ ಉದ್ಘಾಟಿಸಿದರು.

ಪುಟಾಣಿಗಳು, ಶಿಕ್ಷಕರ ಕೈಚಳಕದಿಂದ ಮೂಡಿ ಬಂದ ಸುಂದರವಾದ ಪೂಕಳಂ ಆಕರ್ಷಣೀಯವಾಗಿತ್ತು. ಬಳಿಕ ಶಾಲಾ ಸಂಚಾಲಕಿ ಗೀತಾಂಜಲಿ ಟಿ ಜಿ ವಿದ್ಯಾರ್ಥಿಗಳಿಗೆ ಓಣಂ ಆಚರಣೆಯ ಕಥೆಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಪುಟಾಣಿಗಳು ಹಾಗೂ ಶಿಕ್ಷಕರು ಕೇರಳದ ಸಾಂಪ್ರಾದಾಯಿಕ ಶೈಲಿಯ ಉಡುಗೆಯನ್ನು ತೊಟ್ಟು ಸಂಭ್ರಮಿಸಿದರು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಕಾರ್ಯಕ್ರಮದಲ್ಲಿ ಪುಟಾಣಿಗಳು ಮಹಾಬಲಿ ಹಾಗೂ ವಾಮನ ವೇಷ ಧರಿಸಿದ್ದು, ಆಕರ್ಷಣಿಯವಾಗಿತ್ತು

Related posts

ಸಂಪಾಜೆ: ಲಕ್ಷಾಂತರ ರೂ. ಹಣ ಸಾಗಿಸುತ್ತಿದ್ದ ವಾಹನ ವಶಕ್ಕೆ, ಚುನಾವಣಾಧಿಕಾರಿಗಳ ಮಿಂಚಿನ ಕಾರ್ಯಾಚರಣೆ

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ವಾರ್ಷಿಕ ಕಾರ್ಯ ಚಟುವಟಿಕೆಗಳ ಉದ್ಘಾಟನೆ

ಪರಿವಾರಕಾನ ಬಳಿ ರಾಷ್ಟ್ರೀಯ ಹೆದ್ದಾರಿ ಸಮೀಪಕ್ಕೆ ಬಂದ ಕಾಡಾನೆ, ಒಂಟಿ ಆನೆ ಕಂಡು ಹೆದರಿದ ಸ್ಥಳೀಯರು