Uncategorized

ಚಿತ್ರ ಮಂದಿರದ ಸುತ್ತಮುತ್ತ ತಿರುಗಾಡುತ್ತಿದ್ದ ಅನಾಥ ವೃದ್ಧೆಯ ರಕ್ಷಣೆ

ನ್ಯೂಸ್ ನಾಟೌಟ್: ತನ್ನವರು ಎನ್ನುವವರು ಯಾರೂ ಇಲ್ಲದೆ ಕಳೆದ ನಾಲ್ಕೈದು ದಿನಗಳಿಂದ ತಿರುಗಾಟ ನಡೆಸುತ್ತಿದ್ದ ವೃದ್ಧೆಯೊಬ್ಬರನ್ನು ರಕ್ಷಿಸಲಾಗಿದೆ. ಸದ್ಯ ವೃದ್ಧೆಯನ್ನು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ರಕ್ಷಿಸಿ ವಿನೋಬ ನಗರದ ಶ್ರೀ ಕಾಲಬೈರವೇಶ್ವರ ವೃದ್ಧಾಶ್ರಮಕ್ಕೆ ಸೇರಿಸಿದೆ.

ಶಿವಮೊಗ್ಗದ ನಿರಾಶ್ರಿತ ವೃದ್ದೆಯೊರ್ವರು ಕೆಲವು ದಿನಗಳಿಂದ ಶಿವಮೊಗ್ಗದ ಲಕ್ಷ್ಮೀ ಚಿತ್ರಮಂದಿರದ ಸ್ಥಳದಲ್ಲಿ ಕಾಣಿಸಿಕೊಂಡಿದ್ದರು. ನಿರಾಶ್ರಿತ ಹಿರಿಯ ನಾಗರಿಕ ಮುತ್ತು ರತ್ನಮ್ಮ ಅವರನ್ನು ನೋಡಿದ ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಎಂಬವರು ವಿಚಾರಿಸಿ ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ-14567ಕ್ಕೆ ಕರೆಮಾಡಿ ಮಾಹಿತಿ ತಿಳಿಸಿದರು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶೀಲ್ಪಾ.ಎಂ ದೊಡ್ಡಮನಿ ಅವರ ಸೂಚನೆಯ ಮೇರೆಗೆ ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ ಶಿವಮೊಗ್ಗದ ಕ್ಷೇತ್ರ ನಿರ್ವಹಣಾ ಅಧಿಕಾರಿ ತಿಲಕ್ ರಾಜ್ ಹಾಗೂ ರಾಜ್ಯ ಹಿರಿಯ ನಾಗರಿಕರ ಸಹಾಯವಾಣಿ ಡಿವೈಎಸ್ಪಿ ಕಚೇರಿ ಶಿವಮೊಗ್ಗದ ಆಪ್ತ ಸಮಾಲೋಚಕ ಯುವರಾಜ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ  ನಿರಾಶ್ರಿತ ವೃದ್ಧೆಯನ್ನು  ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ರಕ್ಷಿಸಿ ವಿನೋಬ ನಗರದ ‘ಶ್ರೀ ಕಾಲಭೈರವೇಶ್ವರ ವೃದ್ದಾಶ್ರಮ’ಕ್ಕೆ ಸೇರಿಸಲಾಯಿತು. ಹಿರಿಯ ನಾಗರಿಕ ವೃದ್ಧೆಯ ಸಂಬಂಧಿತ ವ್ಯಕ್ತಿಗಳು ಯಾರಾದರೂ ಇದ್ದಲ್ಲಿ ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ-14567 ಅಥವಾ ರಾಜ್ಯ ಹಿರಿಯ ನಾಗರಿಕರ ಸಹಾಯವಾಣಿ 1090ಗೆ ಕರೆ ಮಾಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Related posts

ತಾಯಿಯಾಗುವ ಸಿಹಿ ಸುದ್ದಿಯನ್ನು ಹಂಚಿಕೊಂಡ ಖ್ಯಾತ ನಟಿ ಅಮಲಾಪೌಲ್..!, ಮದುವೆಯಾದ ಎರಡೇ ತಿಂಗಳಿಗೆ 1+1=3 ಎಂದ ʻಹೆಬ್ಬುಲಿʼ ಅಭಿನೇತ್ರಿ

ಪುತ್ತೂರು: ಅರುಣ್‌ ಪುತ್ತಿಲ ಕಚೇರಿಗೆ ನೀತಿಸಂಹಿತೆ ತಂಡ ಭೇಟಿ, ಪರಿಶೀಲನೆ

ಮುಳಿಯ ಜ್ಯುವೆಲ್ಸ್ ನಲ್ಲಿ ಸಂಸ್ಥಾಪಕರ ದಿನಾಚರಣೆ: 78 ವರ್ಷಗಳ ಸುದೀರ್ಘ ಗ್ರಾಹಕರ ಸೇವೆಗೆ ಸಾಮಾಜಿಕ ಕಳಕಳಿಯ ಸ್ಪರ್ಶ..!