ಕರಾವಳಿ

ಒಡಿಶಾ ರೈಲು ದುರಂತದಲ್ಲಿ ಸಾವಿನಿಂದ ಪಾರಾದ ದಕ್ಷಿಣ ಕನ್ನಡದ ಮೂವರು ಮಹಿಳೆಯರು, ನತದೃಷ್ಟ ರೈಲಿನಲ್ಲಿ ದಕ್ಷಿಣ ಕನ್ನಡದವರೆಷ್ಟು ಮಂದಿ ಇದ್ರು..?

ನ್ಯೂಸ್ ನಾಟೌಟ್: ಬೆಂಗಳೂರಿನಿಂದ ಒಡಿಶಾಕ್ಕೆ ಹೊರಟ ನತದೃಷ್ಟ ಬೆಂಗಳೂರು ಹೌರಾ ಸೂಪರ್ ಫಾಸ್ಟ್‌ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಮಹಿಳೆಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಇದೇ ರೈಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 21 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇವರೆಲ್ಲರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ವೇಣೂರಿನ ಮಮತಾ ಪ್ರಸಾದ್ ಜೈನ್‌, ಆಶಾ ಜೈನ್‌, ದೀಪಶ್ರೀ ಕತ್ತೂಡಿ ವೇಣೂರು ಇವರು ಜೈನರ ತೀರ್ಥ ಕ್ಷೇತ್ರ ಸಮ್ಮೇದ ಶಿಖರ್ಜಿಗೆ ಯಾತ್ರೆ ಹೊರಟಿದ್ದರು. ಇವರು ವೇಣೂರಿನಿಂದ ಕಳಸಕ್ಕೆ ತೆರಳಿ ಕಳಸದಿಂದ ೧೧೦ ಜನ ಯಾತ್ರಿಗಳು ಬಸ್ಸಿನ ಮೂಲಕ ಬೆಂಗಳೂರಿಗೆ ತೆರಳಿದ್ದರು. ಅಲ್ಲಿಂದ ರೈಲಿನಲ್ಲಿ ಒಡಿಶಾದತ್ತ ಪ್ರಯಾಣ ಮಾಡಿದ್ದರು ಎಂದು ತಿಳಿದು ಬಂದಿದೆ. ಸದ್ಯ ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೂರು ರೈಲುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಟ್ಟು 233 ಮಂದಿ ಸಾವಿಗೀಡಾಗಿದ್ದು  900ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

Related posts

ಪುತ್ತೂರಿಗೆ ಆಗಮಿಸಿದ ಯೋಗಿ ಆದಿತ್ಯನಾಥ್ ,ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು,ಅಭಿಮಾನಿಗಳು ಭಾಗಿ

ಮಂಗಳೂರು:ಅನಾಮಧೇಯ ವ್ಯಕ್ತಿಯಿಂದ ಫೋನ್ ಮುಖಾಂತರ ಜೀವ ಬೆದರಿಕೆ,ದ.ಕ. ಜಿಲ್ಲಾಧಿಕಾರಿ ರವೀಂದ್ರರಿಗೆ ಕರೆ ಮಾಡಿ ಹೇಳಿದ್ದೇನು?

ಹಿಂದೂ ಹುಡುಗಿಯ ಹಿಂದೆ ಹೋದ ಕಲ್ಲುಗುಂಡಿಯ ಅನ್ಯಕೋಮಿನ ಹುಡುಗನಿಗೆ ಹಿಗ್ಗಾ ಮುಗ್ಗಾ ಥಳಿತ -ಗಂಭೀರ, ಆಸ್ಪತ್ರೆಗೆ ದಾಖಲು