ಕ್ರೈಂದೇಶ-ಪ್ರಪಂಚ

ಒಡಿಶಾದ ಬರ್ಗರ್‌ ನಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು! ಹಲವು ಅನುಮಾನಕ್ಕೆ ಕಾರಣವಾದ ಸರಣಿ ರೈಲು ದುರಂತ!

ನ್ಯೂಸ್ ನಾಟೌಟ್ :  ಇಡೀ ಜಗತ್ತನ್ನು ಬೆಚ್ಚಿಬೀಳಿಸಿದ ಬಾಲಸೋರ್ ರೈಲು ದುರಂತದ ಕೆಲವು ದಿನಗಳ ನಂತರ, ಒಡಿಶಾದಲ್ಲಿ ಮತ್ತೊಂದು ಸರಕು ಸಾಗಾಟದ ರೈಲು ಇಂದು (ಜೂನ್ 5) ಹಳಿತಪ್ಪಿದೆ ಎಂದು ವರದಿಯಾಗಿದೆ. ಬರ್ಗರ್ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ.

ಒಡಿಶಾದ ಬಾಲಸೋರ್‌ನಲ್ಲಿ ತ್ರಿವಳಿ ರೈಲುಗಳ ನಡುವೆ ಅಪಘಾತ ಸಂಭವಿಸಿದ್ದು, ದುರಂತದಲ್ಲಿ 275 ಮಂದಿ ಸಾವಿಗೀಡಾಗಿದ್ದಾರೆ ಎಂದು ಒಡಿಶಾ ಸರ್ಕಾರ ಭಾನುವಾರ ಅಧಿಕೃತ ಮಾಹಿತಿ ನೀಡಿತ್ತು. ಇದಕ್ಕೂ ಮೊದಲು ಸಾವಿನ ಸಂಖ್ಯೆ 288 ಎಂದು ರೈಲ್ವೇ ಇಲಾಖೆ ತಿಳಿಸಿತ್ತು ಈ ದುರಂತ ಸಂಭವಿಸಿ ಕೇವಲ ೨ ದಿನದೊಳಗೆ ಮತ್ತೊಂದು ದುರ್ಘಟನೆ ಒಡಿಶಾದ ಇನ್ನೊಮದು ಹಳ್ಳಿಯಲ್ಲಿ ನಡೆದಿದ್ದು, ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ವರದಿಯ ಪ್ರಕಾರ, ಸುಣ್ಣದ ಕಲ್ಲು ಸಾಗಿಸುತ್ತಿದ್ದ ಗೂಡ್ಸ್ ರೈಲಿನ ಹಲವಾರು ವ್ಯಾಗನ್‌ಗಳು ಬರ್ಗಢ್‌ನಲ್ಲಿ ಹಳಿತಪ್ಪಿದವು. ಯಾವುದೇ ಪ್ರಾಣಹಾನಿಯಾಗಿಲ್ಲ. ಪೊಲೀಸರು ಈಗಾಗಲೇ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

Related posts

ಶ್ರದ್ದಾ ಪ್ರಕರಣವನ್ನೂ ಮೀರಿಸುವಂತಿದೆ ಬೆಂಗಳೂರು ಕೇಸ್..! 50 ತುಂಡುಗಳನ್ನು ಜೋಡಿಸಿ ವರದಿ ಸಿದ್ಧ ಪಡಿಸುವುದೇ ಸವಾಲು, ಬ್ಯೂಟಿ ಪಾರ್ಲರ್ ​ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಪರಾರಿ..!

ಕರ್ನಾಟಕಕ್ಕೆ ಕರಾಳ ಭಾನುವಾರ..! ಸಾಲು..ಸಾಲು ಅಪಘಾತ, ಅಪಾರ ಪ್ರಮಾಣದ ಜೀವ ಹಾನಿ

ಮೆಟ್ರೊ ಬ್ರಿಡ್ಜ್ ಕೆಳಗೆ ಇಬ್ಬರು ಹುಡುಗಿಯರ ಜೊತೆ ಅಸಭ್ಯವಾಗಿ ವರ್ತಿಸಿದ ಬಾಲಕ..! ಶಾಲಾ ಸಮವಸ್ತ್ರದಲ್ಲಿ ನಡೆಯಿತು ರಾಸಲೀಲೆ! ಇಲ್ಲಿದೆ ವೈರಲ್ ವಿಡಿಯೋ