ಕರಾವಳಿಕ್ರೈಂದೇಶ-ಪ್ರಪಂಚದೇಶ-ವಿದೇಶರಾಜ್ಯವೈರಲ್ ನ್ಯೂಸ್

ದೇಗುಲದ ಹುಂಡಿಯಲ್ಲಿ ಡೆತ್‌ ನೋಟ್‌ ಪತ್ತೆ..! ಅಷ್ಟಕ್ಕೂ ದೇವರಿಗೆ ಬರೆದ ಪತ್ರದಲ್ಲಿ ಏನಿತ್ತು..?

ನ್ಯೂಸ್ ನಾಟೌಟ್: ದೇವಾಲಯದಲ್ಲಿ ಹುಂಡಿ ಒಡೆದಾಗ ಸಿಕ್ಕ ಹತ್ತಾರು ಪತ್ರಗಳ ಪೈಕಿ, ಒಂದು ಪತ್ರದಲ್ಲಿ ಮಹಿಳೆಯೋರ್ವರು ಬರೆದ ಡೆತ್ ನೋಟ್ ಸಿಕ್ಕಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ, ಈ ಘಟನೆ ಮಂಗಳವಾರ (ಮೇ.೧೪) ಮೈಸೂರಿನ ಶ್ರೀಕಂಠೇಶ್ವರ ದೇಗುಲದಲ್ಲಿ ಪತ್ತೆಯಾಗಿದೆ.

“ಹೇ ಭಗವಂತ ! ಮಿತಿ ಮೀರಿದ ಸಾಲದಿಂದ ಜೀವನದಲ್ಲಿ ಬಹಳ ಕಷ್ಟ ಅನುಭವಿಸಿದ್ದೇನೆ. ಸಣ್ಣ ಪುಟ್ಟ ವಿಷ ಯಕ್ಕೂ ಗಂಡ ಜಗಳವಾಡುತ್ತಾರೆ. ನನಗೆ ಬದುಕಲು ಸಾಧ್ಯವಾಗುತ್ತಿಲ್ಲ. ಶನಿದೇವ ನನ್ನ ಸಾವಿಗೆ ಯಾರೂ ಕಾರಣರಲ್ಲ…’ ಇಂಥದೊಂದು ಪತ್ರ ನಂಜನಗೂಡು ಶ್ರೀಕಂಠೇಶ್ವರ ದೇಗುಲದ ಹುಂಡಿ ಎಣಿಕೆಯ ವೇಳೆ ಬೆಳಕಿಗೆ ಬಂದಿದೆ. ವಿಪರೀತ ಸಾಲ, ಬಡ್ಡಿ, ಬ್ಯಾಂಕಿನ ಸಾಲ ಕಟ್ಟಲಾಗುತ್ತಿಲ್ಲ. ಸಾಲದ್ದಕ್ಕೆ ನನ್ನೆಲ್ಲಾ ಒಡವೆಯನ್ನು ಗಿರವಿ ಇಟ್ಟಿರುವೆ. ನನ್ನ ಬಳಿ ಹಣ ಇಲ್ಲದ್ದಕ್ಕೆ ಗಂಡ ಸಣ್ಣ ವಿಚಾರಕ್ಕೂ ಜಗಳವಾಡುತ್ತಾರೆ. ಸಾಲಕ್ಕಾಗಿ ಬ್ಯಾಂಕಿಗೆ ಅರ್ಜಿ ಸಲ್ಲಿಸಿದ್ದೆ, ಅದೂ ಆಗಲಿಲ್ಲ. ನಿತ್ಯವೂ ನೋವು ಅನುಭವಿಸುತ್ತಿ ರುವೆ. ನಿತ್ಯವೂ ಸಣ್ಣ ವಿಚಾರಕ್ಕೂ ಜಗಳ ನಡೆಯುತ್ತೆ. ನನಗೆ ಈ ಜೀವನ ಬೇಡ ಎಂದು ತೀರ್ಮಾನಿಸಿದ್ದೇನೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಹಲವು ಭಕ್ತರು ವಿಚಿತ್ರ ಕೋರಿಕೆಗಳ ಜೊತೆಗೆ ಪತ್ರಗಲನ್ನು ದೇವರ ಹುಂಡಿಗೆ ಹಾಕಿದ್ದು ಸಿಕ್ಕಿದೆ, ಇ ಮದ್ಯೆ ಈ ಡೆತ್ ನೋಟ್ ನಿಂದ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

Click 👇

https://newsnotout.com/2024/05/hindu-muslim-marriage-issue-and-police
https://newsnotout.com/2024/05/vacancy-in-bmtc-conductor-job
https://newsnotout.com/2024/05/love-and-man-mistaken-and-police

Related posts

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ 2975 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ

ಗೂಗಲ್‌ಗೆ 25ನೇ ಹುಟ್ಟುಹಬ್ಬ..! ಈ ಬಗ್ಗೆ ಗೂಗಲ್ ಹೇಳಿದ್ದೇನು? ಸಾಮಾಜಿಕ ಜಾಲತಾಣದಲ್ಲಿ ಗೂಗಲ್ ಹಂಚಿಕೊಂಡ ‘ಗಿಫ್ಟ್’ ಇಲ್ಲಿದೆ ನೋಡಿ

ಸುಳ್ಯ ದಸರಾ ಸಂಭ್ರಮಕ್ಕೆ ದಿನಗಣನೆ; ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕ ಡಾ.ಮಂತರ್ ಗೌಡರಿಗೆ ಸುಳ್ಯ ದಸರಾ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ