ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಫೋಟೋ -ವೀಡಿಯೋ ತೆಗೆಯುವುದಕ್ಕೆ ನಿಷೇಧ ಹೇರಿ ಕರ್ನಾಟಕ ಸರ್ಕಾರ ಆದೇಶ ಪ್ರಕಟಿಸಿದೆ. ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಸರ್ಕಾರಿ ಕಚೇರಿಗಳಲ್ಲಿಫೋಟೋ ಅಥವಾ ವೀಡಿಯೋ ಮಾಡದಂತೆ ಕರ್ನಾಟಕ ಸರ್ಕಾರ ಆದೇಶ ಹೊ ರಡಿಸಿದೆ. ಸರ್ಕಾರಿ ಕಚೇರಿಗಳ ಫೋಟೋ ಅಥವಾ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿಹರಿಬಿಟ್ಟು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಕಾರಣ ನೀಡಿ ಕರ್ನಾಟಕ ಸರ್ಕಾರ ಈ ಆದೇಶ ನೀಡಿದೆ. ಅಲ್ಲದೇ ವಿಶೇಷವಾಗಿ ಮಹಿಳಾ ನೌಕರರಿಗೆ ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಉಲ್ಲೇಖಿಸಿ ಕರ್ನಾಟಕ ಸರ್ಕಾರ ಈ ಆದೇಶ ಪ್ರಕಟಿಸಿದೆ.
previous post