ನ್ಯೂಸ್ ನಾಟೌಟ್ : ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಗೂ ನಿವೃತ್ತ ಪ್ರಾಧ್ಯಾಪಕರೂ ಆದ ವಾಸುದೇವ ಗೌಡ ಅವರು ನಿಧರಾಗಿದ್ದಾರೆ.ಅವರಿಗೆ 84 ವರ್ಷ ವಯಸ್ಸಾಗಿತ್ತು.
ಮಂಗಳೂರಿನ ಕದ್ರಿ ನಿವಾಸಿ ಹಾಗೂ ಅಮರಮುಡ್ನೂರು ಗ್ರಾಮದ ಪೈಲಾರಿನ ಪಡ್ಪು ವಾಸುದೇವ ಗೌಡರು ಸಮಾಜಪರ ಚಟುವಟಿಕೆಗಳಿಂದ ಗುರುತಿಸಿಕೊಂಡಿದ್ದರು.ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆಯೆರೆದ ಶಿಕ್ಷಕರು ಕೂಡ ಹೌದು.ಇವರ ಅಗಲುವಿಕೆ ತುಂಬಾ ನೋವನ್ನುಂಟು ಮಾಡಿದೆ.