ಕರಾವಳಿ

ಸುಬ್ರಹ್ಮಣ್ಯ: ನ.28 – ನ.29 ಮದ್ಯ ಸಿಗಲ್ಲ

ನ್ಯೂಸ್ ನಾಟೌಟ್ : ನ.28 – ನ.29 ಎರಡು ದಿನ ಕುಕ್ಕೆ ಶ್ರೀ ಸುಬ್ರಹಣ್ಯ ದೇವಸ್ಥಾನದ ವಾರ್ಷಿಕ ಚಂಪಾ ಷಷ್ಠಿ ಮಹೋತ್ಸವದ ಪ್ರಯುಕ್ತ ಮದ್ಯದ ಅಂಗಡಿಯನ್ನು ಮುಚ್ಚುವುದಕ್ಕೆ ನಿರ್ಧರಿಸಲಾಗಿದೆ.

ಅಹಿತರ ಘಟನೆ ನಡೆಯಬಾರದು ಎನ್ನುವ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಕರ್ನಾಟಕ ಅಬಕಾರಿ ಕಾಯಿದೆ 1965 ಸೆಕ್ಷನ್ 21(1)ರಡಿ ಅಧಿಕಾರ ಚಲಾಯಿಸಿ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಆದೇಶ ಹೊರಡಿಸಿದ್ದಾರೆ. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾ ಪ್ತಿಯ ಇಂಚಾಡಿ ಬಳಿಯ ಪ್ರಶಾಂತ್ ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ಬೆಳ್ಳಿ ಬಾರ್ ಮತ್ತು ರೆಸ್ಟೋರೆಂಟ್‍ಗಳನ್ನು ಇದೇ ನ.28ರ ಬೆಳಿಗ್ಗೆ 6 ಗಂಟೆಯಿಂದ 29ರ ಮಧ್ಯರಾತ್ರಿ 12 ಗಂಟೆಯವರೆಗೆ ಮುಚ್ಚುವಂತೆ ಆದೇಶದಲ್ಲಿ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

Related posts

ಸೈಂಟ್ ಬ್ರಿಜಿಡ್ಸ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಪೂರ್ವ ತಯಾರಿ, ವಿವಿಧ ಸ್ಪರ್ಧೆ ಆಯೋಜನೆ, ಬಹುಮಾನ ವಿತರಣೆ

ಇಡೀ ರಾಜ್ಯಕ್ಕೆ ಮಾದರಿಯಾದ ಬೆಳ್ತಂಗಡಿಯ ಈ ಪುಟ್ಟ ಗ್ರಾಮ, ಶೇ. 100ರಷ್ಟು ಮತದಾನ

ಎಸ್.ಎಸ್.ಎಲ್.ಸಿ. ಫಲಿತಾಂಶ: ಕೆ.ಎಸ್ ಗೌಡ ವಿದ್ಯಾ ಸಂಸ್ಥೆ ಭರ್ಜರಿ ಸಾಧನೆ