ಬೆಂಗಳೂರು

ಹೊಸ ವರ್ಷಾಚರಣೆಗೆ ಟಫ್ ಪೊಲೀಸ್ ರೂಲ್ಸ್‌

ನ್ಯೂಸ್ ನಾಟೌಟ್: ಮತ್ತೆ ಕರೋನಾ ರೂಪಾಂತರಿ ವೈರಸ್ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಟಫ್‌ ನಿಯಮಾವಳಿಗಳನ್ನು ಪೊಲೀಸ್ ಇಲಾಖೆ ಜಾರಿಗೆ ತಂದಿದೆ. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಲ್ಲಿ ಬಿಗಿ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಹೊಸ ವರ್ಷಾಚರಣೆ ಎಂದರೆ ಬೆಂಗಳೂರಿನ ಎಂಜಿ ರೋಡ್‌ನಲ್ಲಿ ಅಬ್ಬರ ಜೋರಾಗಿಯೇ ಇರುತ್ತದೆ. ಎಲ್ಲರೂ ಪಾರ್ಟಿ ಮೂಡ್‌ನಲ್ಲಿರುತ್ತಾರೆ. ಎಂಜಿ ರೋಡ್‌ ಜನ ಸಂದಣಿಯಿಂದ ತುಂಬಿ ತುಳುಕುತ್ತಿರುತ್ತದೆ. ಜನರ ನೂಕು ನುಗ್ಗಲಿಗೆ ಕಡಿವಾಣ ಹಾಕುವುದಕ್ಕೆ ಪೊಲೀಸರು ನಿರ್ಧರಿಸಿದ್ದಾರೆ. ಮಾಸ್ಕ್ ಮರೆತರೆ ನೋ ಎಂಟ್ರಿ ಎಂಬ ಕಠಿಣ ನಿಯಮ ಜಾರಿಗೆ ತಂದಿದ್ದಾರೆ. ಅಲ್ಲದೆ ಮಧ್ಯರಾತ್ರಿ 1 ಗಂಟೆಗೆ ಎಲ್ಲವೂ ಬಂದ್ ಆಗಬೇಕು. ಆ ನಂತರ ಕೂಡ ಸೆಲೆಬ್ರೆಶನ್ ಮೂಡ್ ನಲ್ಲಿ ಇದ್ರೆ ಪೊಲೀಸ್ ಜೀಪ್ ಹತ್ತಬೇಕಾಗುತ್ತದೆ. ಒಟ್ಟಾರೆ ಬೆಂಗಳೂರಿನ ಪ್ರಮುಖ 30 ಪ್ಲೈವರ್ ಗಳು ಬಂದ್ ಮಾಡಲಾಗುತ್ತಿದೆ. ಡಿ. 31 ರಿಂದ 9:00 ಗಂಟೆಯಿಂದ ಇದು ಜಾರಿಗೆ ಬರುತ್ತದೆ. ನೈಸ್ ರಸ್ತೆಯನ್ನು ರಾತ್ರಿ 9 00 ಕ್ಕೆ ಬಂದ್ ಮಾಡಲಾಗುತ್ತದೆ. ಎಲ್ಲ ಕಡೆ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

Related posts

Challenging Star Darshan arrested: ಚಾಲೆಂಜಿಗ್ ಸ್ಟಾರ್ ದರ್ಶನ್ ಕೊಲೆ ಆರೋಪದಲ್ಲಿ ಬಂಧನ..! ಚಿತ್ರದುರ್ಗದ ವ್ಯಕ್ತಿಯನ್ನು ಬೆಂಗಳೂರಿಗೆ ಕರೆತಂದು ಕೊಲೆ ಮಾಡಿ ಮೋರಿಗೆ ಎಸೆದರು..!

ಬಾಡಿ ಬಿಲ್ಡಿಂಗ್ ನಲ್ಲಿ ಖ್ಯಾತಿಗಳಿಸಿದ್ದ ಆಂಧ್ರ ಮೂಲ ವ್ಯಕ್ತಿ ಬೆಂಗಳೂರಿನಲ್ಲಿ ಸರಗಳ್ಳ! ಈತನನ್ನು ಹೆಡೆಮುರಿ ಕಟ್ಟಿದ್ದೇ ಒಂದು ರೋಚಕ ಕಾರ್ಯಾಚರಣೆ..!

ದಕ್ಷಿಣಕನ್ನಡ ಜಿಲ್ಲೆಗೆ ದಿನೇಶ್‌ ಗುಂಡೂರಾವ್, ಉಡುಪಿಗೆ ಲಕ್ಷ್ಮಿ ಹೆಬ್ಬಾಳ್ಕರ್‌ ಉಸ್ತುವಾರಿ ಸಚಿವರು