ದೇಶ-ಪ್ರಪಂಚ

ಟ್ರಕ್-ಎಸ್‌ಯುವಿ ಕಾರು ಮಧ್ಯೆ ಭೀಕರ ಅಪಘಾತ,ಆರು ಮಂದಿ ಸ್ಥಳದಲ್ಲೇ ದುರ್ಮರಣ,ಓರ್ವ ಗಂಭೀರ

ನ್ಯೂಸ್ ನಾಟೌಟ್:ಮಧ್ಯಪ್ರದೇಶದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ.ಟ್ರಕ್ ಹಾಗೂ ಎಸ್‌ಯುವಿ ಕಾರು ಅಪಘಾತಕ್ಕೀಡಾಗಿದ್ದು,ಆರು ಮಂದಿ ಸ್ಥಳದಲ್ಲೇ ದುರ್ಮರಣವಾಗಿದ್ದು,ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಸಂಭವಿಸಿದೆ.

ಮಧ್ಯಪ್ರದೇಶದ ಸಾಗರ್ ಬಳಿ ಈ ದುರಂತ ಸಂಭವಿಸಿದ್ದು,ಸನೋಧಾ ಪೊಲೀಸ್ ಠಾಣೆ ವ್ಯಾಪ್ತಿಯ ಸಾಗರ್-ಜಬಲ್‌ಪುರ ರಸ್ತೆಯ ಬಮೋರಿ ದೂದರ್ ಬಳಿ ಈ ಘಟನೆ ನಡೆದಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಒಪಿ) ಅಶೋಕ ಚೌರಾಸಿಯಾ ತಿಳಿಸಿದ್ದಾರೆ.ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.

ಪೊಲೀಸರ ಮಾಹಿತಿ ಪ್ರಕಾರ ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದ ಏಳು ಜನರಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.ಆದರೆ ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಪತ್ತೆಹಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related posts

Sarah Jessica Parker: ಕೇವಲ 415 ರೂ. ಬೆಲೆಯ ಸ್ಕರ್ಟ್‌ ಮಾರಾಟವಾಗಿದ್ದು 43 ಲಕ್ಷ ರೂ.ಗೆ..!ಜನಪ್ರಿಯ ನಟಿ ತೊಟ್ಟಿದ್ದ ಈ ಸ್ಕರ್ಟ್‌ಗೆ ಇಷ್ಟೊಂದು ಬೆಲೆ ಆಗಿದ್ದಾದರೂ ಹೇಗೆ?

ಸ್ನೇಹಿತೆಯನ್ನು ಕೊಂದು ಬಾಡಿಗೆ ಮನೆಯ ಫ್ರಿಡ್ಜ್ ​ನಲ್ಲಿಟ್ಟಿದ್ದ ವಿವಾಹಿತ..! ಬರೋಬ್ಬರಿ 8 ತಿಂಗಳ ಬಳಿಕ ಕೃತ್ಯ ಬಯಲಾಗಿದ್ದೇ ರೋಚಕ..!

ಸುಳ್ಳು ಹೇಳಿ ವಿದ್ಯಾರ್ಥಿನಿಯನ್ನು ಮದುವೆಯಾದ ಶಿಕ್ಷಕನ ಬಂಧನ