ದೇಶ-ಪ್ರಪಂಚರಾಜಕೀಯ

ಐವರು ಭಯೋತ್ಪಾದಕರ ಕೊಂದು ಬಿಸಾಕಿದ ಭಾರತೀಯ ಸೈನ್ಯ,ಬಾಲಬಿಚ್ಚಿದ ಭಯೋತ್ಪಾದಕರಿಗೆ ಮತ್ತೊಮ್ಮೆ ಚಳಿ ಬಿಡಿಸಿದ ಇಂಡಿಯನ್ ಆರ್ಮಿ!

ನ್ಯೂಸ್ ನಾಟೌಟ್: ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್‌ನಲ್ಲಿ ಐವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ತಿಳಿದು ಬಂದಿದೆ.ಈ ಬಗ್ಗೆ ಕಾಶ್ಮೀರ ವಲಯ ಪೊಲೀಸರು ಮಾಹಿತಿ ನೀಡಿದ್ದು,ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಶುಕ್ರವಾರ ಎನ್‌ಕೌಂಟರ್‌ನಲ್ಲಿ ಐವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಜೂ. 13 ರಂದು ಕುಪ್ವಾರದ ಎಲ್‌ಒಸಿ ಬಳಿ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆ ಹೊಡೆದುರುಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಈ ಬಗ್ಗೆ ಶೋಧ ಕಾರ್ಯಾಚರಣೆ ಮುಂದುವರಿಯುತ್ತಿದ್ದು,ತನಿಖೆ ಮಾಡಲಾಗುತ್ತಿದೆ ಎಂದು ಕಾಶ್ಮೀರ ಎಡಿಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.ಎಲ್‌ಒಸಿ ಬಳಿಯ ಜುಮಗುಂಡ್ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಭದ್ರತಾ ಪಡೆಗಳು ನಿಖರ ಮಾಹಿತಿ ಪಡೆದ ನಂತರ ಪೊಲೀಸರು ಹಾಗೂ ಸೈನಿಕರು ಉಗ್ರರ ಮೇಲೆ ಜಂಟಿ ಕಾರ್ಯಾಚರಣೆ ನಡೆಸಿ ಗುಂಡಿನ ಸುರಿಮಳೆ ಗೈದಿದ್ದಾರೆ.

Related posts

ಮಾನವ ಗಾತ್ರದ ದೈತ್ಯ ಬಾವಲಿಯನ್ನು ಎಂದಾದರೂ ಕಂಡಿದ್ದೀರಾ?ಈ ಬಾವಲಿ ನೋಡಿ ಜನ ಬೆಚ್ಚಿ ಬಿದ್ದಿದ್ದೇಕೆ?

ಬಣ ಬಡಿದಾಟದ ನಡುವೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಿ ಎಂದು ಸುನಿಲ್ ಕುಮಾರ್ ಮನವಿ..! ಅಚ್ಚರಿ ಮೂಡಿಸಿದ ಕಾರ್ಕಳ ಶಾಸಕರ ನಡೆ..!

ಮುಳ್ಳು ಚುಚ್ಚಿದೆ ಎಂದು ಮಲಗಿದ್ದ ವ್ಯಕ್ತಿ ಬೆಳಗ್ಗೆ ಏಳಲೇ ಇಲ್ಲ..! ಅದು ಚುಚ್ಚಿದ್ದಲ್ಲ ಕಚ್ಚಿದ್ದು..!