ಕ್ರೈಂ

ಮುಂಬೈ ದಾಳಿಯ ‘ತರಬೇತುದಾರ’ ಪಾಕ್ ಜೈಲಿನಲ್ಲಿ ಸಾವು! ಕಳೆದ 16 ವರ್ಷಗಳಿಂದ ಪಾಕಿಸ್ತಾನದ ಕಾರಾಗೃಹದಲ್ಲಿದ್ದ ಉಗ್ರ!

ನ್ಯೂಸ್ ನಾಟೌಟ್ : 2008ರಲ್ಲಿ ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯ ರೂವಾರಿ ಪಾಕಿಸ್ತಾನದ ಕಾರಾಗೃಹದಲ್ಲಿ ಜೀವ ಬಿಟ್ಟಿದ್ದಾನೆ ಎಂದು ವರದಿ ತಿಳಿಸಿದೆ. ಲಷ್ಕರ್ – ಇ – ತೊಯ್ಬಾ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಸದಸ್ಯ ಹಫೀಜ್ ಅಬ್ದುಲ್ ಸಲಾಂ ಭುಟ್ಟಾವಿ ಮೃತಪಟ್ಟ ಉಗ್ರ ಎಂದು ತಿಳಿದುಬಂದಿದೆ.

ಈತ ಕಳೆದ 16 ವರ್ಷಗಳಿಂದ ಪಾಕಿಸ್ತಾನದ ಕಾರಾಗೃಹದಲ್ಲಿದ್ದ. ಉಗ್ರರಿಗೆ ಹಣಕಾಸಿನ ನೆರವು ಸೇರಿದಂತೆ ಹಲವು ಆರೋಪಗಳು ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಈತನನ್ನು ಕಠಿಣ ಕಾರಾಗೃಹ ಶಿಕ್ಷೆಗೆ ಒಳಪಡಿಸಲಾಗಿತ್ತು.

ಇದೀಗ ಈ ಉಗ್ರಗಾಮಿ ಜೈಲಿನಲ್ಲೇ ಜೀವ ಬಿಟ್ಟಿದ್ದಾನೆ ಎಂದು ಪಾಕಿಸ್ತಾನ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳು ಖಚಿತಪಡಿಸಿವೆ. ಸೋಮವಾರ ರಾತ್ರಿ ಉಗ್ರ ಭುಟ್ಟಾವಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಆತ ಸತ್ತ ಸುದ್ದಿಯನ್ನು ಪಾಕಿಸ್ತಾನದ ಹಲವು ಉಗ್ರಗಾಮಿ ಸಂಘಟನೆಗಳೂ ಕೂಡಾ ಘೋಷಿಸಿವೆ. ಉಗ್ರ ಭುಟ್ಟಾವಿ ಹೃದಯಾಘಾತಕ್ಕೆ ತುತ್ತಾಗಿ ಸತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಜೈಲಿನಲ್ಲಿ ಈತನನ್ನು ಇರಿಸಲಾಗಿತ್ತು. ಇನ್ನು ಲಷ್ಕರ್ – ಇ – ತೊಯ್ಬಾ ಉಗ್ರಗಾಮಿ ಸಂಘಟನೆಗೆ ಸೇರಿದ್ದು ಎನ್ನಲಾದ ಗುಂಪೊಂದು ಉಗ್ರ ಭುಟ್ಟಾವಿಯ ಅಂತ್ಯಕ್ರಿಯೆಯ ವಿಡಿಯೋವನ್ನು ಹರಿಬಿಟ್ಟಿದೆ. 78 ವರ್ಷ ವಯಸ್ಸಿನ ಮೃತ ಉಗ್ರ ಭುಟ್ಟಾವಿಯ ಅಂತ್ಯಕ್ರಿಯೆಯನ್ನ ಲಾಹೋರ್ ಸಮೀಪದ ಗ್ರಾಮವೊಂದರ ಮಸೀದಿ ಬಳಿ ನೆರವೇರಿಸಲಾಗಿದೆ. ಮಂಗಳವಾರ ಬೆಳಗ್ಗೆ ಈತನ ಅಂತ್ಯಕ್ರಿಯೆ ನಡೆದಿದೆ ಎನ್ನಲಾಗಿದೆ.

Related posts

ಆಯೋಧ್ಯೆ ರಾಮ ಮಂದಿರದ ಆವರಣದಲ್ಲಿ ಅಚಾನಕ್ಕಾಗಿ ಸಿಡಿದ ಗುಂಡು..! ಪ್ಯಾರಾ ಮಿಲಿಟರಿ ಯೋಧನ ದುರಂತ ಅಂತ್ಯ..!

ಪುತ್ತೂರಲ್ಲಿ ಸಾವಿನ ಮನೆಗೆ ತೆರಳಿ ಸಾಂತ್ವಾನ ಹೇಳಿದ ಪುತ್ತಿಲ ಬಗ್ಗೆ ಅಪಪ್ರಚಾರ..! ಬಕ್ರೀದ್ ಹಬ್ಬಕ್ಕೆ ಹೋದರೆಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ವಿರೋಧಿಗಳು..!

ಸೋಣಂಗೇರಿ: ಕಾರು ಮತ್ತು ಟಿಟಿ ನಡುವೆ ಡಿಕ್ಕಿ..! ಎರಡು ವಾಹನ ಜಖಂ..!