ಸುಳ್ಯ

ಸುಳ್ಯ: ಕಳಂಜ ಭಾಗದಲ್ಲಿ ಬೆಂಕಿ ಹೊತ್ತಿ ಉರಿದು ಹಾನಿ

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಬೆಂಕಿ ಅನಾಹುತಗಳು ಸಂಭವಿಸುತ್ತಿದೆ.ಇದೀಗ ಸುಳ್ಯದ ಕಳಂಜ ಎಂಬಲ್ಲಿ ವಿಷ್ಣು ನಗರದ ಬಳಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.

ಬಿಸಿಲಿನ ಬೇಗೆಯಿಂದ ವಿದ್ಯುತ್ ಟ್ರಾನ್ಸ್ ಫಾರ್ಮರ್‌ನಿಂದ ಬೆಂಕಿ ಕಿಡಿ ಬಿದ್ದು ಅಲ್ಲಲ್ಲಿ ಬೆಂಕಿ ಅವಘಡ ಸಂಭವಿಸುತ್ತಿದೆ. ಮಾ.24 ರಂದು ಕಳಂಜದ ವಿಷ್ಣು ನಗರದ ಪಶು ಚಿಕಿತ್ಸಾಲಯದ ಬಳಿ ವಿದ್ಯುತ್ ಲೈನಿನ ಕೆಳ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಅಲ್ಲಿದ್ದ ಸ್ಥಳೀಯರು ನಾಸಿರ್ ಮಹಮ್ಮದ್, ಭಾಸ್ಕರ ಮತ್ತಿತರು ಬೆಂಕಿಯನ್ನು ನಂದಿಸಿದರು ಎಂದು ತಿಳಿದುಬಂದಿದೆ.

Related posts

ಅಗ್ನಿಪಥ್‌ಗೆ ಆಯ್ಕೆಯಾದ ಸೃಜನ್ ರೈಗೆ ಸನ್ಮಾನ,ಬಂಟರ ಸಂಘದ ವತಿಯಿಂದ ಅಭಿನಂದನೆ

ಅಜ್ಜನ ಮನೆಗೆ ಬಂದಿದ್ದ 4ನೇ ತರಗತಿ ಬಾಲಕ ಸುಳ್ಯದಿಂದ ನಾಪತ್ತೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ತಂದೆ

ಸಂಪಾಜೆ: ಅನಾರೋಗ್ಯದಿಂದ ಬಳಲುತ್ತಿದ್ದ ಕೈಪಡ್ಕದ ಹರಿಶ್ಚಂದ್ರ ನಿಧನ