ದೇಶ-ಪ್ರಪಂಚ

ಮದುವೆಯಾದ ಮರುದಿನವೇ ಉಕ್ರೇನ್ ಗಾಗಿ ಬಂದೂಕು ಹಿಡಿದ ನವದಂಪತಿ

ಮಾಸ್ಕೋ: ಮುಂಬರುವ ಮೇ ತಿಂಗಳಲ್ಲಿ ಮದುವೆಯಾಗಬೇಕಿದ್ದ ಉಕ್ರೇನಿಯನ್ ದಂಪತಿಗಳು ತಮ್ಮ ದೇಶದ ಮೇಲೆ ರಷ್ಯಾದ ಆಕ್ರಮಣದ ಹಿನ್ನೆಲೆಯಲ್ಲಿ ತಮ್ಮ ಮದುವೆಯ ದಿನಾಂಕವನ್ನು ಬದಲಾಯಿಸಿ ಶುಕ್ರವಾರವೇ ಮದುವೆಯಾಗಿರುವ ಘಟನೆ ನಡೆದಿದೆ. ಅಷ್ಟೇ ಅಲ್ಲ ಮದುವೆಯಾದ ಮರುದಿನವೇ ಉಕ್ರೇನಿಯನ್ ರಕ್ಷಣಾ ಪಡೆಗಳನ್ನು ಸೇರಿಕೊಂಡು ತಮ್ಮ ದೇಶದ ಪರವಾಗಿ ರಷ್ಯಾ ವಿರುದ್ಧ ಬಂದೂಕು ಹಿಡಿದು ಹೋರಾಟಕ್ಕಿಳಿದಿದ್ದಾರೆ.

ಅರೀವಾ ಎಂಬ ೨೧ ವರ್ಷದ ಯುವತಿ ಹಾಗೂ ಸ್ವಿಯಾಟೋಸ್ಲಾವ್ ಫರ್ಸಿನ್ ಎಂಬ ೨೪ ವರ್ಷದ ಯುವಕ ಮುಂಬರುವ ಮೇಯಲ್ಲಿ ಮದುವೆಯಾಗಬೇಕಿತ್ತು. ಆದರೆ ತಮ್ಮ ದೇಶದ ಮೇಲೆ ರಷ್ಯಾ ಆಕ್ರಮಣದ ಸುದ್ದಿ ಕೇಳಿದ ನಂತರ ಅವರು ತಮ್ಮ ಪ್ಲಾನ್ ಬದಲಾಯಿಸಿಕೊಂಡರು. ಈ ಸುದ್ದಿ ಜಾಲತಾಣದಲ್ಲಿ ವೈರಲ್ ಆಗಿದೆ.

Related posts

ವಿಮಾನದಲ್ಲಿತ್ತು 10 ಜೀವಂತ ಅನಕೊಂಡಗಳು..! ಏನಿದು ಘಟನೆ..?

ಎಲ್ಐಸಿಗೆ ಭಾರಿ ದೊಡ್ಡ ಆಘಾತ..!ಲಾಭ ಅರ್ಧದಷ್ಟು ಇಳಿಕೆ,ಆದಾಯದಲ್ಲೂ ಕುಸಿತ..!

ಬೆಂಕಿ ಅವಘಡದಲ್ಲಿ ಸುಟ್ಟು ಹೋದ ನವ ಜೋಡಿ..! ಮದುವೆಯಾಗಲೆಂದು ವಿದೇಶದಿಂದ ಬಂದಿದ್ದ ವರ..!