ಕರಾವಳಿ

ನೆಲ್ಯಾಡಿ: ಪಾದಾಚಾರಿಗೆ ಹಿಂದಿನಿಂದ ಗುದ್ದಿದ ಬೈಕ್ ,ಕೊಕ್ಕಡದ ವ್ಯಕ್ತಿಗೆ ಗಾಯ

ನ್ಯೂಸ್ ನಾಟೌಟ್ : ಪಾದಚಾರಿಯೊಬ್ಬರು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿರುವ ಘಟನೆ ವರದಿಯಾಗಿದೆ.ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಹಾರಪತ್ಯೆ ನಿವಾಸಿ ಸಾವೇರ್ ಡಿ.ಸೋಜ(76ವ.)ಗಾಯಗೊಂಡಿರುವ ವ್ಯಕ್ತಿ.

ನೆಲ್ಯಾಡಿ ಗ್ರಾಮದ ಪಡಡ್ಕ ಎಂಬಲ್ಲಿ ಈ ಘಟನೆ ಜೂ.7ರಂದು ಸಂಜೆ ನಡೆದಿದೆ.ಇವರು ನೆಲ್ಯಾಡಿ ಪೇಟೆಗೆ ಬಂದವರು ವಾಪಾಸು ಮನೆಗೆಂದು ನೆಲ್ಯಾಡಿ ಸಂತೆಕಟ್ಟೆ ಕಡೆಯಿಂದ ಹೊರಟಿದ್ದರು.ಈ ವೇಳೆ ಪಡ್ಡಡ್ಕ ಕಡೆಗೆ ಹೋಗುವ ಡಾಮಾರು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗಿ ಪಡ್ಡಡ್ಕ ಅಂಗನವಾಡಿ ಸಮೀಪ ತಲುಪುತ್ತಿದ್ದಂತೆ ಹಿಂದಿನಿಂದ ಬಂದ ಬೈಕ್ ಡಿಕ್ಕಿಯಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಸಾವೇರ್ ಡಿ.ಸೋಜಾ ಅವರು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಬಸ್‌ನಡಿಗೆ ಸಿಲುಕಿ ಪಾದಚಾರಿ ಮಹಿಳೆ ಸಾವು

ಸಂಪಾಜೆ: ಕಾರು -ಬಸ್ ನಡುವೆ ಭೀಕರ ಅಪಘಾತ, ಮೂವರು ದಾರುಣ ಸಾವು

ಪುತ್ತೂರಿಗೆ ಅರುಣ್ ಕುಮಾರ್ ಪುತ್ತಿಲ ಎಂಎಲ್‌ಎ..? ನಿಜ ಆಗುತ್ತಾ ಭವಿಷ್ಯವಾಣಿ..?