ದೇಶ-ಪ್ರಪಂಚದೇಶ-ವಿದೇಶರಾಜಕೀಯವೈರಲ್ ನ್ಯೂಸ್

ಎನ್.ಡಿ.ಎ ಕೂಟದ ಚಂದ್ರಬಾಬು ನಾಯ್ಡುವನ್ನು ಭೇಟಿ ಮಾಡಿದ ಇಂಡಿಯಾ ಕೂಟದ ಸ್ಟಾಲಿನ್..! ಸಂಚಲನ ಸೃಷ್ಟಿಸಿದ ನಾಯಕರ ಭೇಟಿ..!

ನ್ಯೂಸ್ ನಾಟೌಟ್ : ಕೇಂದ್ರದಲ್ಲಿ ಸರ್ಕಾರ ರಚನೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಕಸರತ್ತು ನಡೆಸುತ್ತಿದೆ. ಇದರಲ್ಲಿ ಪ್ರಮುಖ ಎನ್.ಡಿ.ಎ ನಾಯಕರಾದ ಆಂದ್ರದ ಚಂದ್ರಬಾಬು ನಾಯ್ಡು ದೆಹಲಿಯಲ್ಲಿಯೇ ಇಂಡಿಯಾ ಕೂಟದ ಭಾಗವಾಗಿರುವ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ ಸ್ಟಾಲಿನ್ ನನ್ನು ಬೇಟಿಯಾಗಿ ಕುತೂಹಲ ಸೃಷ್ಟಿಸಿದ್ದಾರೆ.

ಕಾಂಗ್ರೆಸ್ ಎನ್.ಡಿ.ಎ ಕೂಟದ ಪ್ರಮುಖರನ್ನು ಸೆಳೆಯುವ ಸತತ ಪ್ರಯತ್ನಗಳನ್ನು ತೆರೆಮರೆಯಲ್ಲಿ ನಡೆಸುತ್ತಿದೆ ಎನ್ನಲಾಗಿದ್ದು, ಈ ಭೇಟಿ ಅದರ ಒಂದು ಭಾಗವಾಗಿರಬಹುದು ಎಂಬ ಚರ್ಚೆ ಜೋರಾಗಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಗೆ ಎನ್‌.ಡಿ.ಎ ಮೈತ್ರಿ ಪಕ್ಷಗಳಾದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷಗಳು ಎನ್‌.ಡಿ.ಎ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಿವೆ. ಇತ್ತ ಇಂಡಿಯಾ ಕೂಟ ಸರ್ಕಾರ ರಚನೆಯಿಂದ ಹಿಂದೆ ಸರಿದಿದೆ ಎನ್ನಲಾಗಿದ್ದರೂ ಆ ಬಗೆಗಿನ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ ಎನ್ನಲಾಗಿದೆ.

ದೆಹಲಿ ಇಂದಿರಾ ಗಾಂಧಿ ಏರ್‌ಪೋರ್ಟ್‌ನಲ್ಲಿ ಈ ಎರಡು ಪ್ರಾದೇಶಿಕ ಪಕ್ಷಗಳ ನಾಯಕರು ಪರಸ್ಪರ ಭೇಟಿಯಾಗಿದ್ದಾರೆ. ಫೋಟೋ ಸಮೇತ ಈ ವಿಚಾರವನ್ನು ಎಂ.ಕೆ. ಸ್ಟಾಲಿನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್‌ನ್ನು ಚಂದ್ರಬಾಬು ನಾಯ್ಡುಗೆ ಟ್ಯಾಗ್ ಮಾಡಿರುವ ಸ್ಟಾಲಿನ್, ತಲೈವರ್ ಕಲೈಗ್ನಾರ್ ಅಂದರೆ ಕರುಣಾನಿಧಿಯವರ ಧೀರ್ಘಕಾಲದ ಸ್ನೇಹಿತ ಚಂದ್ರಬಾಬು ನಾಯ್ಡುಗಾರು ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿದೆ. ನಾನು ಅವರಿಗೆ ಅವರ ಗೆಲುವಿಗೆ ಶುಭಾಶಯ ತಿಳಿಸಿದೆ ಎಂದಿದ್ದಾರೆ.

Click 👇

https://newsnotout.com/2024/06/n-chandrababu-naidu-oath-delayed-for-political-reason
https://newsnotout.com/2024/06/loka-sabha-election-and-bjp-ministers-are-lost-thair-majority
https://newsnotout.com/2024/06/mangaluru-bhajaragadala-and-congress-issue-at-celebration
https://newsnotout.com/2024/06/x-tweeter-and-its-rules-on-users-kannada-news

Related posts

ಬೆಳ್ಳಾರೆ: ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ..! ಸ್ಥಳಕ್ಕೆ ತೆರಳಿದ ಪೊಲೀಸರು

ಸಮುದ್ರದ ಆಳದಲ್ಲಿ ಸಿಕ್ಕಿರುವ ಅಪರೂಪದ ‘ಟೈಟಾನಿಕ್’ ಹಡಗಿನ ವೀಡಿಯೊ ಬಿಡುಗಡೆ, ಹಲವು ರಹಸ್ಯಗಳನ್ನೊಳಗೊಂಡಿದೆ ಈ ಹಡಗು

ಹುಡುಗಿ ವಿಚಾರಕ್ಕೆ 20ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳ ನಡುವೆ ಹೊಡೆದಾಟ..! ಬಸ್ ನಿಲ್ದಾಣದಿಂದ ಓಡಿದ ಪ್ರಯಾಣಿಕರು..!